ಮಂಗಳವಾರ, ಅಕ್ಟೋಬರ್ 26, 2021
23 °C

ಧಾರಾಕಾರ ಮಳೆ: ರೈತರು ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ತಾಲ್ಲೂಕಿನಾದ್ಯಂತ ಧಾರಾಕಾರ ಮಳೆಯಾಗಿದೆ.

ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಪ್ರಾರಂಭವಾದ ಮಳೆ ಒಂದು ತಾಸಿಗೂ ಅಧಿಕ ಕಾಲ ಧಾರಾಕಾರವಾಗಿ ಸುರಿಯಿತು. ಭತ್ತ, ಕಾಫಿ, ಶುಂಠಿ ಬೆಳೆಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಯಿತು.

ದಾರದಹಳ್ಳಿ, ಮಾಕೋನಹಳ್ಳಿ, ಜನ್ನಾಪುರ, ಬೆಟ್ಟದಮನೆ ಮುಂತಾದ ಭಾಗಗಳಲ್ಲಿ ಕಟಾವಾಗಿ ಕಣದಲ್ಲಿ ಒಣಗಿಸುತ್ತಿದ್ದ ಅರೇಬಿಕಾ ಕಾಫಿಯೆಲ್ಲವೂ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಗಿಡದಲ್ಲಿ ಹಣ್ಣಾಗಿದ್ದ ಕಾಫಿಯು ಮಳೆಯ ರಭಸಕ್ಕೆ ನೆಲಕಚ್ಚಿದೆ.

ಮಳೆಯಿಂದ ಕೊಳೆರೋಗಕ್ಕೆ ತುತ್ತಾಗಿದ್ದ ಶುಂಠಿ ಬೆಳೆಯಲ್ಲಿ ರೋಗವು ಉಲ್ಬಣಿಸುವ ಸಂಕಷ್ಟ ಎದುರಾಗಿದೆ. ಅಲ್ಲದೆ, ಭತ್ತದ ಬೆಳೆಯ ತೆನೆ ಒಡೆಯುತ್ತಿದ್ದು, ತೆನೆಯ ಮೇಲೆ ಮಳೆ ಸುರಿದಿದ್ದರಿಂದ ಜೊಳ್ಳಾಗುವ ಭೀತಿ ಉಂಟಾಗಿದೆ.

ಕಡೂರಿನಲ್ಲಿ ಮಳೆ

ಕಡೂರು: ತಾಲ್ಲೂಕಿನಾದ್ಯಂತ ಸೋಮವಾರ ಸಂಜೆ ಬಿರುಸಿನಿಂದ ಭಾರಿ ಮಳೆಯಾಯಿತು.

ಸಂಜೆ ಐದು ಗಂಟೆ ಹೊತ್ತಿಗೆ ಗುಡುಗು ಮಿಂಚಿನಿಂದ ಕೂಡಿ ಆರಂಭವಾದ ಹಸ್ತಾ ಮಳೆ ನಿರಂತರವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ರಸ್ತೆಗಳ ಮೇಲೆಲ್ಲ ನೀರು ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರಾಗಿ ಬೆಳೆದ ರೈತರಿಗೆ ಈ ಮಳೆ ಅನುಕೂಲವಾಗಿದೆ. ಈರುಳ್ಳಿ ಕಟಾವು ಮಾಡಿದ ರೈತರಿಗೆ ತುಸು ತೊಂದರೆಯಾಯಿತು. ಸುರಿವ

ಅಬ್ಬರದ ಮಳೆ

ಬೀರೂರು: ಪಟ್ಟಣ ಮತ್ತು ಸುತ್ತಮುತ್ತ ಸೋಮವಾರ ಸಂಜೆ ಒಂದು ತಾಸಿಗೂ ಹೆಚ್ಚು ಮಳೆ ಸುರಿದು ಇಳೆಯನ್ನು ತಂಪಾಗಿಸಿದೆ.

ಹಲವು ರೈತರು ಆಲೂಗಡ್ಡೆ ಮತ್ತು ಈರುಳ್ಳಿ ಸಂಸ್ಕರಣೆ ಮಾಡು ತ್ತಿದ್ದು, ಬೆಳೆಗಳು ಮಾರಾಟದ ಹಂತದಲ್ಲಿರು ವುದರಿಂದ ಸಂಕಷ್ಟ ಸೃಷ್ಟಿಸಿದರೆ, ಅಡಿಕೆ ತೋಟಗಳಲ್ಲಿ ಕೊಯಿಲಿಗೆ ತೆರಳಿರುವ ಕಾರ್ಮಿಕರಿಗೆ ಅಡಚಣೆ ಉಂಟಾಗಿದೆ.

ರಾಗಿ, ಶೇಂಗಾ ಬೆಳೆಗಳಿಗೆ ಈ ಮಳೆ ಅನುಕೂಲಕರವಾಗಿದ್ದು, ಅಡಕೆ, ತೆಂಗು, ಬಾಳೆ ಮತ್ತಿತರ ತೋಟಗಳಿಗೆ ಕೂಡಾ ನೆರವಾಗಿದೆ.

ಉತ್ತಮ ಮಳೆ

ತರೀಕೆರೆ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ಸೋಮವಾರ ಸಂಜೆ ಆರಂಭವಾದ ಮಳೆ ಅರ್ಧ ತಾಸಿಗೂ ಹೆಚ್ಚು ಸಮಯ ಸುರಿದಿದ್ದು, ರಸ್ತೆ ಮೇಲೆ ನೀರು ಹರಿದು ಚರಂಡಿಗಳಲ್ಲಿ ಹರಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು