ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ನಿಷೇಧದ ಬಗ್ಗೆ ಸಚಿವರಿಂದ ಸುಳಿವು? -ಅನಿಲ್ ಹೊಸಕೊಪ್ಪ

Last Updated 1 ಜನವರಿ 2023, 6:50 IST
ಅಕ್ಷರ ಗಾತ್ರ

ಶೃಂಗೇರಿ: ‘ಅಡಿಕೆ ಭವಿಷ್ಯಕ್ಕೆ ಮಾರಕ ಎಂದು ಸದನದಲ್ಲಿ ಮಾತನಾಡಿರುವ ಸಚಿವ ಆರಗ ಜ್ಞಾನೇಂದ್ರ ಅವರು ನಿಷೇಧದ ಬಗ್ಗೆ ಸುಳಿವು ನೀಡುತ್ತಿದ್ದಾರೆಯೇ’ ಎಂದು ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.


`ಅಡಿಕೆ ಬೆಳೆಗೆ ಪ್ರೋತ್ಸಾಹ ಕೊಡಬಾರದು ಎಂದು ಸದನದಲ್ಲಿ ಆರಗ ಜ್ಞಾನೇಂದ್ರ ಹೇಳಿರುವುದನ್ನು ಮಲೆನಾಡಿನ ಕೃಷಿಕರು ಖಂಡಿಸಲೇಬೇಕು. ಸದನದಲ್ಲಿ ಸರ್ಕಾರದ ಭಾಗವಾಗಿರುವ ಸಚಿವರೇ ಸದನದಲ್ಲಿ ಹೀಗೆ ಹೇಳಿದರೆ ಸಂಕಷ್ಟದಲ್ಲಿರುವ ರೈತರಿಗೆ ಯಾವ ಸಹಾಯ ಹಸ್ತವು ಸಿಗುವುದಿಲ್ಲ. ಈಗಾಗಲೇ ಹಳದಿ ಎಲೆರೋಗ ಮತ್ತು ಎಲೆ ಚುಕ್ಕಿ ರೋಗದಿಂದ ರೈತರು ಆತ್ಮಹತ್ಯೆ ದಾರಿ ಹೀಡಿದಿದ್ದಾರೆ. ಆರಗ ಜ್ಞಾನೇಂದ್ರರ ಈ ಹೇಳಿಕೆಯಿಂದ ಇನ್ನಷ್ಟು ಅಡಿಕೆ ಬೆಳೆಗಾರರು ಆತ್ಮಹತ್ಯೆ ದಾರಿ ಹಿಡಿಯುತ್ತಾರೆ.


ಸರ್ಕಾರ ಹಾಗೂ ಮಲೆನಾಡು ಭಾಗದ ಸಚಿವರು ರೈತರಿಗೆ ಧೈರ್ಯ ಹೇಳಬೇಕು. ಈ ಸಮಯದಲ್ಲಿ ಬೇಜವಾಬ್ದಾರಿ ಹೇಳಿಕೆಯನ್ನು ಕಾನೂನು ಹಾಗೂ ಪರಿಹಾರ ರೂಪಿಸಬೇಕಾಗಿದ್ದ ಸದನದಲ್ಲಿ ಹೇಳಿರುವುದು ಅತ್ಯಂತ ವಿಷಾದನೀಯ. ಗಲ್ಲಿ ಗಲ್ಲಿಗಳಲ್ಲಿ ಬಾರ್ ಮತ್ತು ವೈನ್ ಶಾಪ್‍ಗಳಿಗೆ ಲೈಸೆನ್ಸ್ ಕೊಡುತ್ತಿರುವುದು ನಮ್ಮ ಭವಿಷ್ಯಕ್ಕೆ ಮಾರಕವಲ್ಲವೇ. ಕೆಲವು ದಿನಗಳ ಹಿಂದೆ ಅಡಿಕೆ ತೋಟಗಳಿಗೆ ಭೇಟಿ ನೀಡಿದ್ದು ಮಲೆನಾಡಿನ ಅಡಿಕೆ ಬೆಳೆಗಾರರ ಕಣ್ಣು ಒರೆಸುವ ತಂತ್ರನಾ? ಸಚಿವರೇ ಸದನದಲ್ಲಿ ಮಲೆನಾಡಿನ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಧ್ವನಿಯಾಗಿ, ರೈತರ ಪರವಾಗಿ ನಿಲ್ಲಬೇಕಾಗಿದ್ದು, ಪರಿಹಾರ ಕಂಡುಕೊಳ್ಳುವ ಸ್ಥಳದಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಮಲೆನಾಡಿಗರ ದುರಂತ. ಸಚಿವರು ಈಗಲಾದರೂ ತಮ್ಮ ಹೇಳಿಕೆಯನ್ನು ಕಡತದಿಂದ ವಜಾಮಾಡಿ, ಮಲೆನಾಡಿಗರ ಆತಂಕವನ್ನು ದೂರಮಾಡಿ' ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT