ನರಸಿಂಹರಾಜಪುರ: ಡಿ.ಸಿ.ಎಂ.ಸಿ ಪ್ರೌಢಶಾಲೆಯ ಸಿ.ಬಿ.ಎಸ್.ಇ ವಿಭಾಗದಲ್ಲಿ ಮಳೆಗಾಲದಲ್ಲಿ ಮಕ್ಕಳಿಗೆ ಓಡಾಡಲು ಅನುಕೂಲವಾಗುವಂತೆ ದಾನಿಗಳಾದ ಎಸ್.ಎಸ್.ಶಾಂತಕುಮಾರ್ ₹2 ಲಕ್ಷ ವೆಚ್ಚದಲ್ಲಿ 800 ಅಡಿ ಉದ್ದದ ಕಾರಿಡಾರ್ ಚಾವಣಿ ಮಾಡಿಸಿ ಕೊಟ್ಟಿರುವುದು ಶ್ಲಾಘನೀಯ ಎಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಟಿ.ರಾಜೇಂದ್ರ ಶ್ಲಾಘಿಸಿದರು.

ಪಟ್ಟಣದ ಡಿ.ಸಿ.ಎಂ.ಸಿ. ಪ್ರೌಢಶಾಲೆಯ ಸಿ.ಬಿ.ಎಸ್.ಇ ವಿಭಾಗದಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣದ ಮುಂಭಾಗದಿಂದ ಶಾಲಾ ಕಟ್ಟದೊಳಗೆ ಬರಲು ಅನುಕೂಲವಾಗುವಂತೆ ತಾಲ್ಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್ ಅವರು ವೈಯಕ್ತಿಕವಾಗಿ ₹2 ಲಕ್ಷ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ‘ಗುಳದ ಮನೆ ಪಟೇಲ್ ಜಿ.ಆರ್. ಹಿರಿಯಣ್ಣ ಗೌಡ ಕಾರಿಡಾರ್ ಚಾವಣಿ’ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ತಾಲ್ಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ, ಸಂಘದ ಉಪಾಧ್ಯಕ್ಷ ಎಲ್.ಎಂ.ಸತೀಶ್, ಖಜಾಂಚಿ ಕಟಗಳಲೆ ಲೋಕೇಶ್, ಪ್ರಾಂಶುಪಾಲೆ ಪದ್ಮ ರಮೇಶ್, ಭದ್ರಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೆಮ್ಮನೆ ಮೋಹನ್, ಜಂಟಿ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಇದ್ದರು.

ಕಾರಿಡಾರ್ ಚಾವಣಿ ನಿರ್ಮಿಸಿಕೊಟ್ಟಿರುವ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್ ಅವರಿಗೆ ತಾಲ್ಲೂಕು ಒಕ್ಕಲಿಗರ ಸಂಘದಿಂದ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.