ನರಸಿಂಹರಾಜಪುರ: ಅಕ್ರಮವಾಗಿ 6 ಹಸುಗಳನ್ನು ಲಕ್ಕವಳ್ಳಿಗೆ ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ಭಾನುವಾರ ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ವಾಹನ ಚಾಲಕ ಲಕ್ಕವಳ್ಳಿಯ ಮಣಿ ಹಾಗೂ ಸಹಾಯಕ ಕರಣಕುಮಾರ್ ಬಂಧಿತರು. ಬಿ.ಎಚ್ ಕೈಮರ ಸಮೀಪದ ಶಾಂತಿಭವನ ಚರ್ಚ್ ಸಮೀಪ ಗಸ್ತಿನಲ್ಲಿದ್ದಾಗ ಬಾಳೆಹೊನ್ನೂರು ಭಾಗದಿಂದ ಬಂದ ಪಿಕಪ್ ವಾಹನವನ್ನು ಪೊಲೀಸರು ಅಡ್ಡಗಟ್ಟಿ ಪರಿಶೀಲಿಸಿದಾಗ 5 ಹೋರಿ ಹಾಗೂ 1 ದನ ಪತ್ತೆಯಾಗಿದೆ. ಆರೋಪಿಗಳ ಬಳಿ ಇದಕ್ಕೆ ಸಂಬಂಧಿಸಿ ದಾಖಲೆಗಳು ಇರಲಿಲ್ಲ. ವಿಚಾರಣೆ ನಡೆಸಿದಾಗ ದನಗಳನ್ನು ಕಡಿಯುವುದಕ್ಕಾಗಿ ಖರೀದಿ ಮಾಡಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಬ್ ಇನ್ಸ್ಪೆಕ್ಟರ್ ನಿರಂಜನಗೌಡ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಧು, ಪರಮೇಶ್ವರ್, ಕೌಶಿಕ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.