ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಗಾಂಧೀಜಿ ನೆನಪಿನಂಗಳ, ಅಜ್ಜಂಪುರ ಗುರುತು

ಅಮೃತ ಮಹೋತ್ಸವ: ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟದ 75 ಸ್ಥಳ ಪಟ್ಟಿ
Last Updated 15 ಆಗಸ್ಟ್ 2022, 16:08 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಸ್ವಾತಂತ್ರ್ಯದ ಅಮೃತ ಮಹೋತ್ವದಲ್ಲಿ ಸುಸಂದರ್ಭದಲ್ಲಿ ರಾಜ್ಯದಲ್ಲಿನ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ 75 ಸ್ಥಳಗಳನ್ನು ಗುರುತಿಸಿದ್ದು. ಈ ಪಟ್ಟಿಯಲ್ಲಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದ ಗಾಂಧೀಜಿ ನೆನಪಿನಂಗಳ ಮತ್ತು ಅಜ್ಜಂಪುರ ಇವೆ’ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಆಟದ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಈ ಎರಡು ಸ್ಥಳಗಳ ಜೊತೆಗೆ ಸ್ವಾತಂತ್ರ್ಯದ ಹೋರಾಟ ನೆನಪಿಸುವ ಇನ್ನು ಹಲವು ಸ್ಥಳಗಳು ಜಿಲ್ಲೆಯಲ್ಲಿ ಇವೆ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ತಿರುಗಿ ನಿಂತ ಮೊದಲಿಗರಲ್ಲಿ ತರೀಕೆರೆ ಪಾಳೆಯಗಾರರು ಪ್ರಮುಖರು. ರಂಗಪ್ಪನಾಯಕ ಅವರು ಬ್ರಿಟಿಷರ ಬಂಧನದಲ್ಲಿ 25 ವರ್ಷ ಕಳೆದು ಸೆರೆಯಿಂದ ತಪ್ಪಿಸಿಕೊಂಡು ಬಂದು ಹೋರಾಟದಲ್ಲೇ ಮೃತಪಟ್ಟರು. ಅವರ ಪುತ್ರ ಸರ್ಜಾ ಹನುಮಪ್ಪನಾಯಕ ಅವರು ಬ್ರಿಟಿಷರ ಮೋಸದ ಬಲೆಗೆ ಸಿಲುಕಿ ಗಲ್ಲಿಗೇರುವಂತಾಗಿದ್ದನ್ನು ಜನಪದರು ಲಾವಣಿಯ ರೂಪದಲ್ಲೂ ಹಿಡಿದಿಟ್ಟಿದ್ದಾರೆ ಎಂದರು.

ಸ್ವಾತಂತ್ರ್ಯಕ್ಕಾಗಿ ಜಿಲ್ಲೆಯ ಹೊಸಕೊಪ್ಪ ಕೃಷ್ಣರಾಯ, ಅಣ್ಣಪ್ಪಶೆಟ್ಟಿ, ಬಸಪ ಶೆಟ್ಟಿ, ಕೋದಂಡಭಟ್ಟರು, ಮಾಕೋನಹಳ್ಳಿ ಹುಚ್ಚೇಗೌಡ, ಭಾಗಮನೆ ದೇವೇಗೌಡ, ಬಿ.ಎಸ್.ಕೃಷ್ಣೇಗೌಡ, ಕೆ.ಆರ್.ನಾರಾಯಣನಾಯಕ್, ಹಂಚಿಶಿವಣ್ಣ, ಸುಬ್ರಮಣ್ಯ ಶೆಟ್ಟಿ, ಸತ್ಯನಾರಾಯಣಶೆಟ್ಟಿ, ವೈ.ಎಂ.ಚಂದ್ರಶೇಖರಯ್ಯ, ಆರ್.ಶಂಕರಪ್ಪ, ನಾರಾಯಣನಾಯ್ಕ, ಕೆ.ಟಿ.ರಾಮರಾಜೇ ಅರಸು, ಕೆ.ಆರ್.ನಾರಾಯಣಶೆಟ್ಟಿ, ಜನಕರಾಜಗುಪ್ತ, ಎಂ.ಎಲ್.ನಾಗಪ್ಪಶೆಟ್ಟಿ, ಎಂ.ಎಲ್.ವಾಸುದೇವ ಮೂರ್ತಿ, ಎ.ಎಚ್.ಸಂಜೀವಪ್ಪನಾಯ್ಡು, ಶ್ರೀನಿವಾಸನಾಯ್ಡು, ಡಿ.ಎಸ್ .ಕೃಷ್ಣಮೂರ್ತಿ, ಎಂ. ಮೈಲಾರಿರಾವ್, ವಿ.ಎಂ.ಜಿ.ಮೊದಲಿಯಾರ್, ಎ.ಬಿ.ಬಸವಾರಾಧ್ಯ, ಬಿ.ಪಿ. ಬಸಪ್ಪಶೆಟ್ಟಿ, ಡಿ.ಇ.ನಾರಾಯಣಗೌಡ, ರಾಜಭೂಷಣನಾಯ್ಡು, ಕೆ.ಎಂ.ರಾಮಚಂದ್ರಶೆಟ್ಟಿ, ಸುಬ್ರಾಯ ಗಣೇಶಯಾಜಿ, ಸಿ.ವಿ.ವೆಂಕಟರಾವ್, ಬಾದರಾಯಣ, ಕಥೆಗಾರ ಅಶ್ವತ್ಥ, ಬೆಣ್ಣೆ ಸುಬ್ಬಯ್ಯ, ಎಂ.ಕೆ. ಶ್ರೀನಿವಾಸಶೆಟ್ಟಿ ಮೊದಲಾದವರು ಹೋರಾಡಿದ್ದಾರೆ ಎಂದು ಸ್ಮರಿಸಿದರು.

ಹೊಸಕೊಪ್ಪ ಕೃಷ್ಣರಾಯ ಅವರು ಗಾಂಧೀಜಿ ಅವರನ್ನು ಚಿಕ್ಕಮಗಳೂರು ಜಿಲ್ಲೆಗೆ ಕರೆತರಲು ಪ್ರಮುಖ ಪಾತ್ರ ವಹಿಸಿದ್ದರು. ಕಡೂರು, ಚಿಕ್ಕಮಗಳೂರು ನಗರಗಳಲ್ಲಿ ನಡೆದ ಸಭೆಗಳಲ್ಲಿ ಗಾಂಧೀಜಿ ಭಾಷಣ ಪ್ರೇರಣೆಯಿಂದ ಜಿಲ್ಲೆಯ ಯುವಕರ ಬಣವೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿತು. ಸಿ.ಎಂ.ಎಸ್.ಶಾಸ್ತ್ರಿ, ಬಿ.ಕೇಶವಯ್ಯ, ಸಿ.ಆರ್.ಶಂಕರಪ್ಪ, ಟಿ.ಸೀತಾರಾಮಯ್ಯ, ಚಂದ್ರಶೇಖರಯ್ಯ ಮುಂತಾದ ಹೋರಾಟಗಾರರನ್ನ ಸ್ಮರಿಸಬಹುದು ಎಂದರು.

ಮಳೆಯಿಂದಾಗಿ ಜಿಲ್ಲೆ ತತ್ತರಿಸಿದೆ. ಈವರೆಗೆ 405 ಮನೆಗಳಿಗೆ ಹಾನಿ ಪರಿಹಾರ ನೀಡಲಾಗಿದೆ. 3856 ಹೆಕ್ಟೇರ್ ತೋಟಗಾರಿಕೆ ಬೆಳೆ, 561 ಹೆಕ್ಟೇರ್ ಕೃಷಿ ಬೆಳೆ ನಷ್ಟವಾಗಿದೆ. ಜೂನ್ ನಿಂದ ಈವರೆಗೆ ನಷ್ಟ ಪ್ರಮಾಣ ₹ 282.51 ಕೋಟಿ ಅಂದಾಜಿಸಲಾಗಿದೆ ಎಂದು ವಿವರಿಸಿದರು.

‘ಹರ್‌ ಘರ್‌ ತಿರಂಗ’ ಅಭಿಯಾನ ಅಂಗವಾಗಿ ಜನರು ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ಟಭಕ್ತಿ ಪ್ರದರ್ಶಿಸಿದ್ದಾರೆ. ಮಾಧ್ಯಮದ ರಾಜೇಶ್‌ ಮತ್ತು ತಂಡದವರು ಸಾಕ್ಷ್ಯಚಿತ್ರ ತಯಾರಿಸಿ ಸ್ವತಃ ಅಭಿನಯಿಸಿ ಸ್ವಾತಂತ್ರ್ಯ ಸೇನಾನಿಗಳ ಕಿರು ಪರಿಚಯ ಮಾಡಿಕೊಟ್ಟಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT