ಚಿಕ್ಕಮಗಳೂರು: ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಲಕ್ಷ್ಮೀಪುರದ ಜಾಫರ್ ಮತ್ತು ಚೈತ್ರಾ ವಿವಾಹಕ್ಕೆ ಅರ್ಜಿ ಸಲ್ಲಿಸಿ, ಪರಸ್ಪರ ಪುಷ್ಪ ಮಾಲೆ ಧರಿಸಿ ಸಂತಸ ವ್ಯಕ್ತಪಡಿಸಿದರು.

ಮಧ್ಯಾಹ್ನ 3.30ರ ಸುಮಾರಿಗೆ ಅರ್ಜಿ ಸಲ್ಲಿಸಿದರು. ಜತೆಯಲ್ಲಿದ್ದ ವಿವಿಧ ಸಂಘಟನೆಗಳ ಮುಖಂಡರು ಇಬ್ಬರಿಗೂ ಶುಭ ಹಾರೈಸಿದರು.
‘ಜಾಫರ್ ಮತ್ತು ಚೈತ್ರಾ ವಿವಾಹ ನೋಂದಾವಣಿಗೆ ಅರ್ಜಿ ಸಲ್ಲಿಸಿದ್ದಾರೆ. 30 ದಿನ ನೋಟಿಸ್ ಅವಧಿ ಇರುತ್ತದೆ. ಆಕ್ಷೇಪಣೆ ಸಲ್ಲಿಕೆಯಾದರೆ ವಿಚಾರಣೆ ನಡೆಸುತ್ತೇವೆ. ಸಲ್ಲಿಕೆಯಾಗದಿದ್ದರೆ ವಿವಾಹ ನೋಂದಾವಣಿ ಆಗುತ್ತದೆ’ ಎಂದು ಉಪನೋಂದಣಾಧಿಕಾರಿ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಚೈತ್ರಾ ಮತ್ತು ಜಾಫರ್ ಪ್ರೀತಿಸಿದ್ದು ಸೆ.15ರಂದು ಉಪನೋಂದಣಾಧಿಕಾರಿ ಕಚೇರಿಗೆ ಮದುವೆಯಾಗಲು ಬಂದಿದ್ದಾಗ ಬಜರಂಗದಳದವರು ಅಡ್ಡಿಪಡಿಸಿದ್ದರು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.