ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: 2.08 ಲಕ್ಷ ಮತದಾರರು, 253 ಮತಗಟ್ಟೆ

Published 25 ಏಪ್ರಿಲ್ 2024, 14:13 IST
Last Updated 25 ಏಪ್ರಿಲ್ 2024, 14:13 IST
ಅಕ್ಷರ ಗಾತ್ರ

ಕಡೂರು : ಹಾಸನ ಲೋಕಸಬಾ ಕ್ಷೇತ್ರಕ್ಕೆ ಸೇರಿರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು208253 ಮತದಾರರಿದ್ದಾರೆ. ಆ ಪೈಕಿ 103774 ಪುರುಷ,104474 ಮಹಿಳೆಯರು ಹಾಗೂ ಇತರೆ 5  ಮತದಾರರಿದ್ದಾರೆ. ಕ್ಷೇತ್ರದಾದ್ಯಂತ 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ 3201 ಮತದಾರರು ಪ್ರಥಮಬಾರಿಗೆ ಮತ ಚಲಾಯಿಸಲಿದ್ದಾರೆ.1144 ಸಿಬ್ಬಂದಿ  ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಚುನಾವಣಾಧಿಕಾರಿ ಯೋಗಾನಂದ ಮತ್ತು ಸಹಾಯಕ ಚುನಾವಣಾಧಿಕಾರಿ ಎಂ.ಪಿ. ಕವಿರಾಜ್ ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಡಿ‌ಮಸ್ಟರಿಂಗ್ ಕೇಂದ್ರದಲ್ಲಿ ನಿಯೋಜಿತ ಮತಗಟ್ಟೆ ಅಧಿಕಾರಿಗಳಿಗೆ ಮತಯಂತ್ರ ಮತ್ತು ವಿವಿ ಪ್ಯಾಟ್‌ಗಳನ್ನು ವಿತರಿಸಿದರು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಸ್ಥಳದಲ್ಲೇ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಡಿವೈಎಸ್ಪಿ ನೇತೃತ್ವದ ಮೂವರು ವೃತ್ತ ನಿರೀಕ್ಷಕರು, 19 ಪಿಎಸೈ ಸೇರಿದಂತೆ 449ಕ್ಕೂ  ಹೆಚ್ಚು ಪೊಲೀಸ್ ಸಿಬ್ಬಂದಿ ಭಧ್ರತೆಗಾಗಿ ನಿಯೋಜನೆಗೊಂಡಿದ್ದಾರೆ. 253 ಮತಗಟ್ಟೆಗಳಲ್ಲಿ 6 ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳೆಂದು‌ ಗುರುತಿಸಲಾಗಿದೆ. ಡಿಮಸ್ಟರಿಂಗ್ ಕೇಂದ್ರಕ್ಕೆ ಹಾಸನ ಜಿಲ್ಲಾಧಿಕಾರಿ ಜಿ.ಸತ್ಯಭಾಮ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.

ಯಾವುದೇ ತೊಂದರೆಗಳು ಎದುರಾಗದಂತೆ ಕ್ಷೇತ್ರಾದ್ಯಂತ ಶಾಂತಿಯುತ ಮತದಾನಕ್ಕಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಯೋಗಾನಂದ ತಿಳಿಸಿದರು. ತಾಲ್ಲೂಕು ಪಂಚಾಯಿತಿ ಇಒ ಸಿ.ಆರ್. ಪ್ರವೀಣ್ ಇದ್ದರು.

ಮತಗಟ್ಟೆ ಅಧಿಕಾರಿಗಳು ಮತಯಂತ್ರಗಳನ್ನು ಕೊಂಡೊಯ್ಯುತ್ತಿರುವುದು
ಮತಗಟ್ಟೆ ಅಧಿಕಾರಿಗಳು ಮತಯಂತ್ರಗಳನ್ನು ಕೊಂಡೊಯ್ಯುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT