ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಕದಾಸರ ತತ್ವಾದರ್ಶ ಅಳವಡಿಸೋಣ’

ಕನಕ ಜಯಂತಿಯಲ್ಲಿ ಸಾಹಿತಿ ಬೂದಾಳ್ ನಟರಾಜ್ ಹೇಳಿಕೆ
Last Updated 9 ಡಿಸೆಂಬರ್ 2018, 17:01 IST
ಅಕ್ಷರ ಗಾತ್ರ

ಕಡೂರು: ‘ಕನಕದಾಸರನ್ನು ಕೇವಲ ದಾಸಶ್ರೇಷ್ಠ, ಕವಿ, ವ್ಯಾಸರಾಜರ ಶಿಷ್ಯ ಎಂದಷ್ಟೇ ನೋಡಬಾರದು. ಅವರ
ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಕನಕತನವನ್ನು ಬೆಳೆಸಿಕೊಳ್ಳೋಣ’ ಎಂದು ಕನಕಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ನಟರಾಜ್ ಬೂದಾಳು ಹೇಳಿದರು.

ಮಲ್ಲೇಶ್ವರದ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಶನಿವಾರ ಏರ್ಪಡಿಸಿದ್ದ ಕನಕಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತದ ಮೂಲಕುಲಗಳಲ್ಲಿ ಕುರುಬ ಸಮುದಾಯ ಬಹುಮುಖ್ಯವಾದದ್ದು. ಎಲ್ಲವನ್ನೂ ಕಳೆದುಕೊಳ್ಳುವ ಹಾದಿಯಲ್ಲಿರುವ ನಾವು ಕನಕನನ್ನೂ ಕಳೆದುಕೊಳ್ಳುವ ದಾರಿ ಹಿಡಿದಿರುವುದು ವಿಪರ್ಯಾಸ’ ಎಂದು ವಿಷಾದ ವ್ಯಕ್ತಪಡಿಸಿದರು.

ನಾವು ಇಂದು ಹಂಪೆಯ ವಿರೂಪಾಕ್ಷನನ್ನು, ಬೀರದೇವರನ್ನು, ಕುಲಗುರು ರೇವಣಸಿದ್ದರನ್ನು ಕಳೆದುಕೊಂಡಿದ್ದೇವೆ. ಆದರೆ, ಕನಕದಾಸರನ್ನು ಸಹ ಕಳೆದುಕೊಳ್ಳುವುದು ಬೇಡ. ಇದರ ಬಗ್ಗೆ ಯುವಕರು ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.

ಶಾಸಕ ಬೆಳ್ಳಿಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಕನಕದಾಸರು, ಅಂಬೇಡ್ಕರ್,‍ ಬುದ್ಧ, ಬಸವಾದಿ ಶರಣರು ಎಲ್ಲರೂ ತಳಸಮುದಾಯಗಳನ್ನು ಮೇಲೆತ್ತುವ ಕಾರ್ಯ ಮಾಡಿದರು. ಅಂತಹ ಮಹಾನ್ ಚೇತನದ ಸಂಸ್ಮರಣೆ ಶ್ಲಾಘನೀಯ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವರ್ಣಾಂಬ ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ, ‘ಕನಕದಾಸರ ಸಿದ್ದಾಂತ ವನ್ನು, ತತ್ವಾದರ್ಶವನ್ನು ನಮ್ಮಲ್ಲೂ ಸ್ವಲ್ಪಭಾಗ ಅಳವಡಿಸಿಕೊಂಡು ನಮ್ಮ ಜೀವನವನ್ನು ಸರಿದಾರಿಗೆ ಕೊಂಡೊ ಯ್ಯಲು ಚಿಂತನೆ ನಡೆಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.‍ಆರ್.ಮಹೇಶ್ ಒಡೆಯರ್,‍ ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಕೆ.ಎಚ್.ಎ.ಪ್ರಸನ್ನ, ರಾಜ್ಯ ಸಂಘದ ನಿರ್ದೇಶಕ ಕರಿಬಡ್ಡೆ ಶ್ರೀನಿವಾಸ್, ಕೆ.ಎಸ್.ರಮೇಶ್, ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ಸ್ವರ್ಣಾಂಬ ದೇಗುಲ ಸಮಿತಿಯ ಕಾರ್ಯಾಧ್ಯಕ್ಷ ಎಂ.ಟಿ.ಹನುಮಂತಪ್ಪ, ಜಿಲ್ಲಾ ಗಂಗಾಮತಸ್ಥ ಸಂಘದ ಕಾರ್ಯಾಧ್ಯಕ್ಷ ಪುಟ್ಟಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಶೂದ್ರ ಶ್ರೀನಿವಾಸ್, ನಟ
ರಾಜ್, ವಸಂತ, ಮುಖಂಡರಾದ ಎಂ.ಅರ್.ಧರ್ಮಣ್ಣ, ಸಂಗೊಳ್ಳಿ ರಾಯಣ್ಣ ಯುವ ವೇದಿಕೆಯ ಪದಾಧಿ ಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT