ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಬಾಲಕನನ್ನು ವರಿಸಿದ ಯುವತಿ: ಕಡೂರಿನಲ್ಲಿ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ತಾಲ್ಲೂಕಿನಲ್ಲಿ ಯುವತಿಯೊಬ್ಬಳು ತನಗಿಂತ ಕಿರಿಯ ಬಾಲಕನನ್ನು ವರಿಸಿದ್ದು, ಈ ಸಂಬಂಧ ಯುವತಿ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

20 ವರ್ಷದ ಯುವತಿಗೆ, ಫೇಸ್‌ಬುಕ್ ಮೂಲಕ 17 ವರ್ಷದ ಹುಡುಗನ ಪರಿಚಯವಾಗಿದೆ. ಈ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಆದರೆ, ಹುಡುಗ, ಯುವತಿಗಿಂತ ಮೂರು ವರ್ಷ ಚಿಕ್ಕವನೆಂಬ ವಿಷಯ ತಿಳಿದಿದ್ದರೂ, ಎರಡೂ ಮನೆಯವರು ಪ್ರೇಮವಿವಾಹಕ್ಕೆ ಸಮ್ಮತಿಸಿದ್ದರು. ಹುಡುಗನ ಮನೆಯಲ್ಲೆ ಎರಡೂ ಕಡೆಯ ಹಿರಿಯರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲೇ ಜೂನ್ 16ರಂದು ಮದುವೆಯೂ ನಡೆದಿದೆ.

ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ಜೂನ್ 23ರಂದು ಮಾಹಿತಿ ದೊರೆತಿತ್ತು. ಪೊಲೀಸರೊಡನೆ ಅಂಗನವಾಡಿ ಮೇಲ್ವಿಚಾರಕಿ ಜಾಕೀರ್ ತಾಜ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮೇಘರಾಜ್ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸ್ಥಳಕ್ಕೆ ತೆರಳಿ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.

ಯುವತಿಯನ್ನು ಜಿಲ್ಲೆಯ ಸ್ವಾಧಾರ ಕೇಂದ್ರಕ್ಕೆ ಕಳುಹಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು