ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಡೂರು | ಬಾರದ ಮಳೆ: ಬಾಡುತ್ತಿವೆ ಬೆಳೆ; ಫಸಲು ಕೈಗೆಟುಕದ ಆತಂಕದಲ್ಲಿ ರೈತರು

ಎನ್‌. ಸೋಮಶೇಖರ್‌
Published : 19 ಸೆಪ್ಟೆಂಬರ್ 2025, 5:04 IST
Last Updated : 19 ಸೆಪ್ಟೆಂಬರ್ 2025, 5:04 IST
ಫಾಲೋ ಮಾಡಿ
Comments
ಬೀರೂರು ಹೋಬಳಿಯಲ್ಲಿ ಕಾಳು ಕಟ್ಟುವ ಸಮಯದಲ್ಲಿ ಮಳೆ ಇಲ್ಲದೆ ಒಣಗಿದ ಜೋಳದ ಫಸಲು
ಬೀರೂರು ಹೋಬಳಿಯಲ್ಲಿ ಕಾಳು ಕಟ್ಟುವ ಸಮಯದಲ್ಲಿ ಮಳೆ ಇಲ್ಲದೆ ಒಣಗಿದ ಜೋಳದ ಫಸಲು
ಹಿರೇನಲ್ಲೂರು ಹೋಬಳಿಯಲ್ಲಿ ತುಂತುರು ನೀರಾವರಿ ಮೂಲಕ ರಾಗಿ ಬೆಳೆ ರಕ್ಷಿಸಿಕೊಳ್ಳಲು ರೈತರು ಮುಂದಾಗಿರುವುದು 
ಹಿರೇನಲ್ಲೂರು ಹೋಬಳಿಯಲ್ಲಿ ತುಂತುರು ನೀರಾವರಿ ಮೂಲಕ ರಾಗಿ ಬೆಳೆ ರಕ್ಷಿಸಿಕೊಳ್ಳಲು ರೈತರು ಮುಂದಾಗಿರುವುದು 
ರೈತರಿಗೆ ದ್ರವರೂಪದ ಯೂರಿಯಾ ಪರಿಚಯ
-ರಸಗೊಬ್ಬರಗಳ ಬೆಲೆ ₹ 1600ರ ಆಸುಪಾಸಿನಲ್ಲಿದ್ದರೆ ಯೂರಿಯಾಗೆ ₹1690 ಸಬ್ಸಿಡಿಯೇ ಇದ್ದು ಕೇವಲ ₹ 300ರ ಆಸುಪಾಸಿನಲ್ಲಿ ರೈತರ ಕೈಗೆಟಕುವ ದರದ ಗೊಬ್ಬರವಾಗಿದೆ. ಆದ್ದರಿಂದ ರೈತರು ಯೂರಿಯಾ ಖರೀದಿಗೆ ಮುಗಿಬಿದ್ದಿದ್ದಾರೆ. ಬೆಳೆ ದಷ್ಟಪುಷ್ಟವಾಗಲು ಡಿಎಪಿ ಪೊಟ್ಯಾಷ್‌ ಯೂರಿಯಾ ಎಲ್ಲ ಗೊಬ್ಬರಗಳನ್ನೂ ನೀಡಬೇಕು. ಯೂರಿಯಾ ಬಿತ್ತನೆಯಾದರೆ ಅರ್ಧಭಾಗ ಭೂಮಿಗೆ ಅರ್ಧಭಾಗ ವಾತಾವರಣಕ್ಕೆ ಸೇರಿಹೋಗುವ ಜತೆಗೆ ತನಗೆ ಸಿಕ್ಕ ಎಲ್ಲವನ್ನೂ ಕಲುಷಿತ ಮಾಡುವ ಕ್ಯಾನ್ಸರ್‌ ಕಾರಕ ಗುಣವನ್ನೂ ಹೊಂದಿರುವುದರಿಂದ ನ್ಯಾನೋ(ದ್ರವ ರೂಪದ) ಯೂರಿಯಾ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು. ರಾಗಿ ಬಿತ್ತನೆ ಹಾಗೂ ನಿರ್ವಹಣೆಗೆ ರೈತರು ಪ್ರತಿ ಎಕರೆಗೆ ಸುಮಾರು ₹ 10–12 ಸಾವಿರ ಖರ್ಚು ಮಾಡಿದ್ದಾರೆ. ಬೆಳೆವಿಮೆ ಮಳೆ ಆಶ್ರಿತ ಭೂಮಿಗೆ ಎಕರೆಗೆ ₹344ರಂತೆ ಪಾವತಿಸಿದ್ದರೆ ಬೆಳೆನಷ್ಟವಾದರೆ ಹೆಕ್ಟೇರ್‌ಗೆ ₹ 42500 (ಎಕರೆಗೆ ₹17 ಸಾವಿರ) ಪರಿಹಾರ ಲಭ್ಯವಿದೆ. ಮಳೆ ಕೊರತೆಯಿಂದ ಬರ ಘೋಷಣೆಯಾದರೆ ಕೇಂದ್ರ ಮತ್ತು ರಾಜ್ಯಗಳ ಮಾರ್ಗಸೂಚಿಯಂತೆ ₹7500 ಪರಿಹಾರ ದೊರಕುತ್ತದೆ. ಈ ಪರಿಹಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT