ಅಬುಧಾಬಿ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅಫ್ಗಾನಿಸ್ತಾನದ ಆಟಗಾರ ಮೊಹಮ್ಮದ್ ನಬಿ, ಒಂದೇ ಓವರ್ನಲ್ಲಿ ಐದು ಸಿಕ್ಸರ್ಗಳನ್ನು ಸಿಡಿಸಿದ್ದಾರೆ.

ಅಬುಧಾಬಿಯಲ್ಲಿ ಗುರುವಾರ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ನಬಿ, ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ ಅಫ್ಗಾನ್ ಒಂದು ಹಂತದಲ್ಲಿ 18 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ನಬಿ ಅಮೋಘ ಆಟದ ನೆರವಿನಿಂದ ಅಂತಿಮ ಎರಡು ಓವರ್ಗಳಲ್ಲಿ ತಂಡವು 49 ರನ್ ಪೇರಿಸಿತು.

ಈ ಪೈಕಿ ಶ್ರೀಲಂಕಾದ ಸ್ಪಿನ್ನರ್ ದುನಿತ್ ವೆಲ್ಲಾಳಗೆ ಅವರ ಇನಿಂಗ್ಸ್ನ ಕೊನೆಯ ಓವರ್ನಲ್ಲಿ ನಬಿ ಐದು ಸಿಕ್ಸರ್ಗಳನ್ನು ಸಿಡಿಸಿದರು. ನಬಿ ಅರ್ಧಶತಕ ಕೇವಲ 20 ಎಸೆತಗಳಲ್ಲೇ ದಾಖಲಾಗಿತ್ತು.

ಇಷ್ಟಾದರೂ ಪಂದ್ಯ ಗೆಲ್ಲುವಲ್ಲಿ ಅಫ್ಗಾನಿಸ್ತಾನ ಯಶಸ್ವಿಯಾಗಲಿಲ್ಲ. 170 ರನ್ಗಳ ಗುರಿ ನಾಲ್ಕು ವಿಕೆಟ್ ನಷ್ಟಕ್ಕೆ ತಲುಪಿದ ಶ್ರೀಲಂಕಾ, ಸತತ ಮೂರನೇ ಗೆಲುವಿನೊಂದಿಗೆ ಸೂಪರ್ ಫೋರ್ ಹಂತಕ್ಕೆ ಲಗ್ಗೆಯಿಟ್ಟಿತ್ತು. ಮತ್ತೊಂದೆಡೆ ಅಫ್ಗಾನಿಸ್ತಾನದ ಕನಸು ಭಗ್ನಗೊಂಡಿತ್ತು.

ವೆಲ್ಲಾಳಗೆ ಪಿೃತ ವಿಯೋಗ...

ಶ್ರೀಲಂಕಾದ ಆಟಗಾರ ದುನಿತ್ ವೆಲ್ಲಾಳಗೆ ಅವರ ತಂದೆ ನಿಧನರಾಗಿದ್ದಾರೆ. ಇದರಿಂದಾಗಿ ಏಷ್ಯಾ ಕಪ್ ಟೂರ್ನಿಯನ್ನು ಅರ್ಧದಿಂದಲೇ ಮೊಟಕುಗೊಳಿಸಿ ಸ್ವದೇಶಕ್ಕೆ ಮರಳಿದ್ದಾರೆ.

ಅಫ್ಗಾನಿಸ್ತಾನ ವಿರುದ್ಧದ ಪಂದ್ಯದ ಬಳಿಕವಷ್ಟೇ ವೆಲ್ಲಾಳಗೆ ಅವರಿಗೆ ತಂದೆಯ ನಿಧನ ವಾರ್ತೆ ತಿಳಿದು ಬಂತು. ಅಫ್ಗಾನಿಸ್ತಾನದ ಬ್ಯಾಟರ್ ಮೊಹಮ್ಮದ್ ನಬಿ ಸಹ ಸಂತಾಪ ಸೂಚಿಸಿದ್ದಾರೆ.
.Asia Cup: ಲಂಕಾ ಪಡೆಗೆ ಹ್ಯಾಟ್ರಿಕ್ ಜಯ; ಟೂರ್ನಿಯಿಂದ ಹೊರಬಿದ್ದ ಅಫ್ಗಾನಿಸ್ತಾನ.Asia Cup: ಪಾಕಿಸ್ತಾನ ವಿರುದ್ಧ ಕ್ರಮಕ್ಕೆ ಐಸಿಸಿ ಚಿಂತನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.