ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ಮಳೆ: ಕೊಚ್ಚಿಹೋದ ಸಸಿಮಡಿ, ನೆಲಕಚ್ಚಿದ ಮನೆಗಳು

Published 23 ಜುಲೈ 2023, 14:22 IST
Last Updated 23 ಜುಲೈ 2023, 14:22 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಲ್ಲಿ ಶನಿವಾರ ತಡರಾತ್ರಿ ಆರಂಭವಾದ ಧಾರಾಕಾರ ಮಳೆ ಭಾನುವಾರ ಇಡೀ ಸುರಿಯಿತು.

ಮಳೆಯಿಂದಾಗಿ ಹೇಮಾವತಿ, ಚಿಕ್ಕಳ್ಳ, ದೊಡ್ಡಳ್ಳ, ಸುಂಡೇಕೆರೆ ಹಳ್ಳ, ಜಪಾವತಿ, ಸುಣ್ಣದ ಹಳ್ಳಗಳಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿದ್ದು, ಹೇಮಾವತಿ ನದಿಯು ಪ್ಯಾಟೆಹಿತ್ಲು, ಉಗ್ಗೇಹಳ್ಳಿ ಬಳಿ ಗದ್ದೆಬಯಲಿನ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಮಳೆ ಹೆಚ್ಚಾದರೆ ಉಗ್ಗೆಹಳ್ಳಿ ಕಾಲೊನಿಯ ತಡೆಗೋಡೆಯವರೆಗೂ ವ್ಯಾಪಿಸುವ ಆತಂಕ ಎದುರಾಗಿದೆ. ಭಾನುವಾರ ಗಾಳಿಯ ಪ್ರಮಾಣ ಕಡಿಮೆ ಇದ್ದುದರಿಂದ ಹಾನಿಯ ಪ್ರಮಾಣ ಕಡಿಮೆಯಾಗಿದ್ದು, ದೇವರುಂದ, ಮೇಕನಗದ್ದೆ, ಜಿ.ಹೊಸಳ್ಳಿ ಭಾಗಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಬೆಟ್ಟಗೆರೆ ಗ್ರಾಮದ ಸುರೇಶ್ ಎಂಬವರ ಮನೆ ಕುಸಿದಿದ್ದು, ತ್ರಿಪುಗ ಗ್ರಾಮದ ರಾಧಮ್ಮ ಅವರ ಮನೆಯ ಚಾವಣಿಗೆ ಹಾನಿಯಾಗಿದೆ. ಹಂತೂರು, ದೇವರುಂದ, ಜಿ.ಅಗ್ರಹಾರ, ಹೊಸಳ್ಳಿ, ಮುಗ್ರಹಳ್ಳಿ, ಗುಣಿಬೈಲ್ ಭಾಗಗಳಲ್ಲಿ ಹೇಮಾವತಿ ನದಿ ಪಾತ್ರದಲ್ಲಿ ಹಾಕಿದ್ದ ಭತ್ತದ ಗದ್ದೆಯ ಸಸಿಮಡಿಗಳು ಕೊಚ್ಚಿ ಹೋಗಿವೆ. ಹ್ಯಾರಗುಡ್ಡೆ, ಬಕ್ಕಿ, ದೋಣಿಗೋಡು ಗ್ರಾಮಗಳಲ್ಲಿ ಕಾಫಿ, ಅಡಿಕೆ ತೋಟಗಳಲ್ಲಿ ನೀರು ನಿಂತಿದ್ದು, ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳಿಗೆ ಹಾನಿಯಾಗಿದೆ.

ಮಳೆಯಿಂದ ಭಾನುವಾರ ಕಾಫಿತೋಟ, ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತವಾಗಿದ್ದವು. ಜನರು ಮನೆಯಿಂದ ಹೊರಗೆ ಬರದೆ ಇದ್ದುದರಿಂದ ವ್ಯಾಪಾರ ವಹಿವಾಟು ಸ್ಥಗಿತವಾಗಿತ್ತು. ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ದೂರದ ಊರುಗಳಿಂದ ತಾಲ್ಲೂಕಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ದೇವರಮನೆ, ಎತ್ತಿನಭುಜ ತಾಣಗಳಲ್ಲಿ ಕಿಕ್ಕಿರಿದು ಸೇರಿದ್ದರು.

ಮೂಡಿಗೆರೆ ತಾಲ್ಲೂಕಿನ ತ್ರಿಪುರ ಗ್ರಾಮದ ರಾಧಮ್ಮ ಅವರ ಮನೆಯ ಚಾವಣಿ ಕುಸಿದಿದೆ
ಮೂಡಿಗೆರೆ ತಾಲ್ಲೂಕಿನ ತ್ರಿಪುರ ಗ್ರಾಮದ ರಾಧಮ್ಮ ಅವರ ಮನೆಯ ಚಾವಣಿ ಕುಸಿದಿದೆ
ಮೂಡಿಗೆರೆ ತಾಲ್ಲೂಕಿನ ಹಂತೂರು ಗ್ರಾಮದ ಬಳಿ ಮಳೆಯಿಂದ ಭತ್ತದ ಗದ್ದೆಯಲ್ಲಿ ಹಾಕಿದ್ದ ಸಸಿಮಡಿಗಳು ಮುಳುಗಿವೆ
ಮೂಡಿಗೆರೆ ತಾಲ್ಲೂಕಿನ ಹಂತೂರು ಗ್ರಾಮದ ಬಳಿ ಮಳೆಯಿಂದ ಭತ್ತದ ಗದ್ದೆಯಲ್ಲಿ ಹಾಕಿದ್ದ ಸಸಿಮಡಿಗಳು ಮುಳುಗಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT