ಕೊಪ್ಪ: ಉತ್ತಮ ಗುಣಮಟ್ಟದಿಂದ ಕೂಡಿದ್ದ ಪಟ್ಟಣದ ಟಾಕೀಸ್ ರಸ್ತೆಗೆ ಮಂಗಳವಾರ ಡಾಂಬರೀಕರಣ ಮಾಡಿರುವುದಕ್ಕೆ ಪಂಚಾಯಿತಿ ಸದಸ್ಯರು ಸಹಿತ ಸಾರ್ವಜನಿಕರು ಆಕ್ಷೇಪಿಸಿದ್ದಾರೆ.

ಟಾಕೀಸ್ ರಸ್ತೆಗೆ ಹೊಂದಿಕೊಂಡಿರುವ, ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದ ಎದುರು ಇರುವ ರಸ್ತೆಯು ಹೊಂಡ ಗುಂಡಿಗಳಿಂದ ಕೂಡಿದ್ದರೂ ಗುಂಡಿ ಮುಚ್ಚುವ ಕೆಲಸ ಮಾಡಿಲ್ಲ. ಇಲ್ಲವೇ ಈ ಹಣವನ್ನು ಬೇರೆ ಅಭಿವೃದ್ಧಿ ಕೆಲಸಕ್ಕೆ ಬಳಸಬಹುದಿತ್ತು. ಜನರ ತೆರಿಗೆ ಹಣ ಬೇಡದ ಕಡೆ ವ್ಯಯ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.

‘ಟಾಕೀಸ್ ರಸ್ತೆ ಚೆನ್ನಾಗಿದೆ. ಇಂಟರ್ ಲಾಕ್ ಹಾಕಲಾಗಿದೆ. ಈ ರಸ್ತೆಗೆ ಬಳಸುತ್ತಿರುವ ಅನುದಾನವನ್ನು ಇದೇ ವಾರ್ಡ್ನ ಬೇರೆ ಅಭಿವೃದ್ಧಿ ಕೆಲಸಕ್ಕೆ ಬಳಸಬಹುದಿತ್ತು’ ಎಂದು ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಸಂದೇಶ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕಾಂತ್, ‘ರಸ್ತೆ ಡಾಂಬರೀಕರಣ 15ನೇ ಹಣಕಾಸು ಯೋಜನೆಯ ಅನುದಾನವಾಗಿದ್ದು, ಕಳೆದ ಬಾರಿಯೇ ಸದಸ್ಯರು ನಿರ್ಣಯ ಕೈಗೊಂಡಿದ್ದರು. ಗುಂಡಿ ಬಿದ್ದ ಕಡೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಬೇರೆ ಇಲಾಖೆಯಿಂದ ಯೋಜನೆ ರೂಪಿತವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.