ಭಾನುವಾರ, ಮೇ 22, 2022
26 °C

ಚಿಕ್ಕಮಗಳೂರು: ವಿದ್ಯುತ್ ಆಘಾತದಲ್ಲಿ ರೈತ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಜ್ಜಂಪುರ: ತಾಲ್ಲೂಕಿನ ಗುಡ್ಡದಹಳ್ಳಿ ಗ್ರಾಮದ ರೈತ ಶ್ರೀನಿವಾಸ್ (27) ವಿದ್ಯುತ್ ಆಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ.

ಹೊಲದಿಂದ ಟ್ರ್ಯಾಕ್ಟರ್‌ನಲ್ಲಿ ರಾಗಿಹುಲ್ಲು ತರಲಾಗುತ್ತಿತ್ತು. ಹುಲ್ಲು ಬೀಳದಂತೆ ತಡೆಯಲು ತಂತಿ ಬಿಗಿಯಲಾಗುತ್ತಿತ್ತು. ಆ ತಂತಿ, ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಪ್ರವಹಿಸಿತು. ಟ್ರ್ಯಾಕ್ಟರ್‌ನ ಟೈರ್‌ಗಳಿಗೆ ಬೆಂಕಿ ತಗುಲಿತು. ಟ್ರ್ಯಾಕ್ಟರ್ ಹೊತ್ತಿ ಉರಿಯುವುದನ್ನು ತಡೆಯಲು ಹೋದ ವೇಳೆ ಶ್ರೀನಿವಾಸ್‌ಗೆ ವಿದ್ಯುತ್ ಶಾಖ್ ತಗುಲಿ ಮೃತಪಟ್ಟರು ಎಂದು ಗ್ರಾಮದ ಮಂಜುನಾಥ್ ತಿಳಿಸಿದರು.

ಈ ಬಗ್ಗೆ ಪ್ರಕರಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತರಿಗೆ ತಾಯಿ, ಸಹೋದರ, ಆರು ಸಹೋದರಿಯರು ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು