ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆಯಿಂದ ಹಾನಿ ಪ್ರದೇಶಕ್ಕೆ ಶಾಸಕಿ ಭೇಟಿ

Published 29 ಮೇ 2024, 15:45 IST
Last Updated 29 ಮೇ 2024, 15:45 IST
ಅಕ್ಷರ ಗಾತ್ರ

ಆಲ್ದೂರು: ಮಳೆಯಿಂದ ಹಾನಿಗೊಳಗಾಗಿದ್ದ ಆಲ್ದೂರು, ವಸ್ತಾರೆ ಮತ್ತು ಅಂಬಳೆ ಹೋಬಳಿಗಳಿಗೆ ಶಾಸಕಿ ನಯನಾ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.

ಮಳೆಯ ಹಾನಿಯಿಂದ ತೊಂದರೆಗೊಳಗಾದ ಸಂತೆ ಮೈದಾನದ ರಶೀದ್, ಮುನ್ನಿ, ನವೀದ್ ಮುಂತಾದವರ ಮನೆಗಳಿಗೆ ಶಾಸಕಿ ಭೇಟಿ ನೀಡಿದರು. ಮಳೆ ಹಾನಿಯ ಪರಿಹಾರ ಒಂದು ಕುಟುಂಬಕ್ಕೆ ಮಾತ್ರ ದೊರೆತಿದ್ದು, ದಾಖಲೆ ಒದಗಿಸದಿರುವವರು ಶೀಘ್ರ ಕಂದಾಯ ಇಲಾಖೆಗೆ ದಾಖಲೆ ನೀಡಬೇಕು ಎಂದರು.

ವಿಳಂಬ ಇಲ್ಲದೆ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬ್ಲಾಕ್ ಅಧ್ಯಕ್ಷ ಮುದಾಬಿರ್, ಹೋಬಳಿ ಅಧ್ಯಕ್ಷರಾದ ಕೆಳಗೂರು ಪೂರ್ಣೇಶ್, ದಿಣ್ಣೆಕೆರೆ ಪೂರ್ಣೇಶ್, ಬ್ಯಾರಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎ.ಯು, ಇಬ್ರಾಹಿಂ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಶ್ರಫ್, ದೊಡ್ಡಮಾಗರವಳ್ಳಿ ಪಂಚಾಯಿತಿ ಕಾರ್ಯದರ್ಶಿ ದೊಡ್ಡಯ್ಯ,ಕಂದಾಯ ನಿರೀಕ್ಷಕ ವೆಂಕಟೇಶ್, ಗ್ರಾಮ ಲೆಕ್ಕಿಗ ಮಧು, ಆಲ್ದೂರು ಪಿಡಿಒ ಶಂಶೂನ್ ನಹರ್, ಪ್ರಮುಖರಾದ ವನಮಾಲಾ ಮೃತ್ಯುಂಜಯ, ಜೀವನ್.ಕೆ, ಗೋಪಾಲ್, ಮಮತಾ, ತುಡುಕೂರು ಅನುಪ್ ಗೌಡ, ಈರೇಗೌಡ, ಪೇಂಟರ್ ಶಿವಕುಮಾರ್, ಕೃಪಾಕ್ಷ ಕೋಟ್ಯಾನ್, ಮನೋಜ್, ತೀರ್ಥ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT