ಶೌಚಾಲಯ ಯೋಜನೆಗೆ ಮೋದಿ ಹೆಸರಿಡಬೇಕು: ಸಿ.ಟಿ.ರವಿ ಒತ್ತಾಸೆ

ಚಿಕ್ಕಮಗಳೂರು: ‘ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ 13.5 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. ಶೌಚಾಲಯ ನಿರ್ಮಾಣ ಯೋಜನೆಗೆ ಪ್ರಧಾನಿ ಮೋದಿ ಹೆಸರಿಡಲು ಕ್ರಮವಹಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಾಗಾರದಲ್ಲಿ ಮಾತನಾಡಿ, ‘13.5 ಕೋಟಿ ಶೌಚಾಲಯ ನಿರ್ಮಿಸಿರುವುದು ಮಹತ್ವದ ಕಾರ್ಯ. ಶೌಚಾಲಯಕ್ಕೆ ಮೋದಿ ಅವರ ಹೆಸರಿಡುವುದು ಗೌರವದ ಮತ್ತು ಸ್ವಾಭಿಮಾನದ ಸಂಗತಿ’ ಎಂದು ಹೇಳಿದರು.
‘ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಲಿ’
ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಅಫ್ಗನ್‌ನಲ್ಲಿನ ದೌರ್ಜನ್ಯ, ಮಹಿಳಾ ವಿರೋಧಿ ನೀತಿಯು ಮನುಕುಲಕ್ಕೆ ಅಪಮಾನಕರ ಸಂಗತಿ. ಅದಕ್ಕೆ ‘ಷರಿಯತ್’ನಿಂದ ಪ್ರಚೋದನೆ ಸಿಕ್ಕಿದ್ದರೆ, ‘ಷರಿಯತ್’ಅನ್ನೇ ಬದಲಾಯಿಸಲು ಮುಸ್ಲಿಂ ವಿದ್ವಾಂಸರು ಆಲೋಚಿಸಬೇಕು. ಇದು ಅಫ್ಗನ್ ಆಂತರಿಕ ವಿಷಯ ಎಂದು ಪರಿಭಾವಿಸಬಾರದು. ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.