ಮೂಡಿಗೆರೆ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ಮೀನು–ಮಾಂಸದ ಅಂಗಡಿಗಳು ತಲೆ ಎತ್ತಿದ್ದು, ಇವುಗಳು ಬೀದಿ ನಾಯಿಗಳ ಸಾಕು ತಾಣಗಳಾಗಿವೆ.

ಪಟ್ಟಣದ ಜೆ.ಎಂ. ರಸ್ತೆ ತಿರುವಿನಿಂದ ಗಂಗನಮಕ್ಕಿಯವರೆಗೂ ಮುಖ್ಯ ರಸ್ತೆಯಲ್ಲಿಯೇ 20ಕ್ಕೂ ಅಧಿಕ ಮೀನು, ಮಾಂಸದ ಅಂಗಡಿಗಳಿವೆ. ಕೆಲವು ಅಂಗಡಿಗಳ ತ್ಯಾಜ್ಯದ ನೀರು ರಸ್ತೆ ಮೇಲೆ ಹರಿಯುತ್ತಿದ್ದರೂ, ಪಟ್ಟಣ ಪಂಚಾಯಿತಿಗೆ ಕಾಣಿಸುವುದಿಲ್ಲ. ಅನಧಿಕೃತವಾಗಿ ಅಂಗಡಿಗಳನ್ನು ತೆರೆದರೂ ಪಟ್ಟಣ ಪಂಚಾಯಿತಿಯ ಹೊಂದಾಣಿಕೆ ನೀತಿಯಿಂದಾಗಿ ಸ್ಥಳೀಯರು ಸಮಸ್ಯೆ ಎದುರಿಸುವಂತಾಗಿದೆ.

ಖಾಲಿ ಜಾಗಗಳಲ್ಲಿ ಟೆಂಟ್ ನಿರ್ಮಿಸಿಕೊಂಡು ಅಂಗಡಿ ಮಾಡಿಕೊಳ್ಳಲಾಗುತ್ತಿದೆ. ಪರವಾನಗಿ ಶುಲ್ಕ ಭರಿಸದೇ ಪಟ್ಟಣ ಪಂಚಾಯಿತಿಗೂ ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತಿದೆ. ಮೀನು, ಮಾಂಸದ ಅಂಗಡಿಗಳ ಮುಂಭಾಗದ ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ತೆರಳಬೇಕಿದೆ. ಮೀನು, ಮಾಂಸದ ಅಂಗಡಿಗಳಿಗಾಗಿಯೇ ದಶಕದ ಹಿಂದೆ ಮಾರ್ಕೆಟ್ ರಸ್ತೆಯಲ್ಲಿ ನಿರ್ಮಿಸಿದ ಅಂಗಡಿ ಮಳಿಗೆಗಳು ಹರಾಜಾಗದೇ ತುಕ್ಕು ಹಿಡಿದಿವೆ.

ತ್ಯಾಜ್ಯ ನಿರ್ವಹಣೆ ವೈಜ್ಞಾನಿಕವಾಗಿರದೇ ಮಾಂಸದ ತುಂಡುಗಳು, ಮೀನಿನ ತ್ಯಾಜ್ಯಗಳನ್ನು ತಿಂದು ಬೀದಿ ನಾಯಿಗಳು ತಮ್ಮ ಸಂತತಿ ಹೆಚ್ಚಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ಜಿಲ್ಲಾಡಳಿತವು ಅನಧಿಕೃತವಾಗಿ ನಿರ್ಮಿಸಿರುವ ಮೀನು, ಮಾಂಸದ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ನೆಮ್ಮದಿ ನೀಡಬೇಕಿದೆ.

- ಸಾಹಿರಬಾನು, ಗಂಗನಮಕ್ಕಿ, ಮೂಡಿಗೆರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.