ಮೂಡಿಗೆರೆ: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾರಂಜನ್ ಅಜಿತ್ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

11 ಸದಸ್ಯರಿರುವ ಪಟ್ಟಣ ಪಂಚಾಯಿತಿಯಲ್ಲಿ ಮೊದಲ 10 ತಿಂಗಳ ಅವಧಿಯಲ್ಲಿ ಬಿಜೆಪಿಯ ಪಿ.ಜಿ. ಅನುಕುಮಾರ್ ಹಾಗೂ ನಂತರ 20 ತಿಂಗಳು ಜೆ.ಬಿ. ಧರ್ಮಪಾಲ್ ಅಧ್ಯಕ್ಷರಾಗಿದ್ದರು.

2ನೇ ಅವಧಿಯಲ್ಲಿ 15 ತಿಂಗಳು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯದೆ ಆಡಳಿತಾಧಿಕಾರಿ ನೇಮಿಸಲಾಗಿತ್ತು. ನಂತರದ 15 ತಿಂಗಳ ಅವಧಿಗೆ ಚುನಾವಣೆ ಸಂದರ್ಭದಲ್ಲಿ ಪಂಚಾಯಿತಿಯಲ್ಲಿ ಜೆಡಿಎಸ್ ಏಕೈಕ ಸದಸ್ಯೆಯಾಗಿರುವ ಗೀತಾರಂಜನ್ ಅಜಿತ್ಕುಮಾರ್ (ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ಕುಮಾರ್ ಅವರ ಪತ್ನಿ) ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು.

ಬಿಜೆಪಿ ಸದಸ್ಯ ಜೆ.ಬಿ. ಧರ್ಮಪಾಲ್ ಅವರು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದರಿಂದ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದ ಗೀತಾರಂಜನ್ ಅಧ್ಯಕ್ಷರಾಗಿದ್ದರು. ಹೊಸಕೆರೆ ರಮೇಶ್ ಉಪಾಧ್ಯಕ್ಷರಾಗಿದ್ದರು.

ಈ ವೇಳೆ, ಮೊದಲ 5 ತಿಂಗಳ ವಧಿಗೆ ಗೀತಾರಂಜನ್, ನಂತರದ 10ತಿಂಗಳ ಅವಧಿಗೆ ಕೆ. ವೆಂಕಟೇಶ್ ಅಧ್ಯಕ್ಷರಾಗುವಂತೆ ಆಂತರಿಕ ಒಪ್ಪಂದವೇರ್ಪಟ್ಟಿತ್ತು ಎನ್ನಲಾಗಿದೆ. ಅದರಂತೆ ಜ. 28ಕ್ಕೆ 5ತಿಂಗಳು ಪೂರ್ಣಗೊಂಡಿದೆ. ಫೆ. 3ರಂದು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಸದಸ್ಯರು ಸಭೆ ಸೇರಿದಾಗ, ಅಧ್ಯಕ್ಷರು ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದು, ಅದರಂತೆ ಚಿಕ್ಕಮಗಳೂರಿಗೆ ಹೋಗಿ ಉಪ ವಿಭಾಗಾಧಿಕಾರಿ ರಶ್ಮಿ ಅವರಿಗೆ ರಾಜೀನಾಮೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.