ಮಂಗಳವಾರ, ಮಾರ್ಚ್ 9, 2021
23 °C

40 ಕ್ಕೂ ಹೆಚ್ಚು ಕುರಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಯರೇಹಳ್ಳಿಯ ಜಮೀನಿನಲ್ಲಿ ಮಂದೆ ನಿಂತಿದ್ದ ಕುರಿಗಳಲ್ಲಿ 40ಕ್ಕೂ ಹೆಚ್ಚು ಮೃತಪಟ್ಟಿವೆ.

ನಾಗಮಂಗಲ ರೈಲ್ವೆ ಗೇಟ್‌ ಪ್ರದೇಶಕ್ಕೆ ಕುರಿಗಳು ಮೇಯುಲು ಹೋಗಿದ್ದವು. ಸೊಪ್ಪು– ಸೆದೆ ‌ತಿಂದ ನಂತರ ಕುರಿಗಳು ಮೃತಪಟ್ಟಿವೆ ಯರೇಹಳ್ಳಿ ಗ್ರಾಮಸ್ಥ ರಾಜಾ ನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿರಾ ಭಾಗದಿಂದ ಇಲ್ಲಿಗೆ ಬಂದಿರುವ ಕುರಿಗಾಹಿಗಳು ಗ್ರಾಮದ ಜಮೀನೊಂದರಲ್ಲಿ ಮಂದೆ ಬಿಟ್ಟಿದ್ದಾರೆ. ಕುರಿಗಳು ಒಮ್ಮಲೇ ಸಾವಿಗೀಡಾಗಿರುವುದು ಆತಂಕಕ್ಕೆ ಎಡೆಮಾಡಿದೆ. ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಉಮೇಶ್‌ಸ್ಥಳಕ್ಕೆ ಭೇಟಿ ನೀಡಿ, ಮಾದರಿ ಸಂಗ್ರಹಿಸಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು