ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಸಂಘಕ್ಕೆ ₹ 8.62 ಲಕ್ಷ ಲಾಭ: ಡಿ.ಆರ್.ಈಶ್ವರ್

Last Updated 24 ಸೆಪ್ಟೆಂಬರ್ 2022, 5:26 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2021–22ನೇ ಸಾಲಿನಲ್ಲಿ ₹ 8.62 ಲಕ್ಷ ಲಾಭ ಗಳಿಸಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಆರ್.ಈಶ್ವರ್ ತಿಳಿಸಿದರು.

ಇಲ್ಲಿನ ಗುರುಭವನದಲ್ಲಿ ಬುಧವಾರ ನಡೆದ ನರಸಿಂಹರಾಜಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಸಾಲಿನಲ್ಲಿ 257 ಷೇರುದಾರರಿಗೆ ₹ 3.67 ಕೋಟಿ ಬೆಳೆ ಸಾಲ ನೀಡಲಾಗಿದೆ. ಕಳ್ಳಿಕೊಪ್ಪದಲ್ಲಿ ₹ 29.70 ಲಕ್ಷ ವೆಚ್ಚದ ಬಹುಉಪಯೋಗಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ. ಸಹಕಾರ ಸಂಘದ ವ್ಯಾಪ್ತಿಯಲ್ಲಿ 61 ಮಹಿಳಾ ಸ್ವಸಹಾಯ ಸಂಘಗಳಿದ್ದು, ₹ 30 ಲಕ್ಷ ಸಂಘದಲ್ಲಿ ಠೇವಣಿಯನ್ನು ಇಟ್ಟಿವೆ. ಸಂಘವು 65 ವರ್ಷ ಪೂರ್ಣಗೊಳಿಸಿದ್ದು, ಪ್ರಗತಿಯತ್ತ ಮುನ್ನಡೆಯಲು ಸದಸ್ಯರ ಸಹಕಾರ ಕಾರಣ ಎಂದರು.

ಸಂಘದ ಸದಸ್ಯರಾದ ಬಿ.ಕೆ.ಜಾನಕೀರಾಂ, ಸುಬ್ಬಣ್ಣ, ಎಲ್.ನಾಗರಾಜ್, ಮಾಜಿ ಅಧ್ಯಕ್ಷ ಚೆರಿಯನ್ ಸಲಹೆ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಟಿ.ಶ್ರೀಕಾಂತ್ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷೆ ಸವಿತಾ ರತ್ನಾಕರ್, ನಿರ್ದೇಶಕರಾದ ಎಂ.ಟಿ.ಕುಮಾರ್, ಎಚ್.ಸಿ.ನಾಗೇಂದ್ರ, ಎಸ್.ಎನ್.ಸುಬ್ಬಯ್ಯ ಗೌಡ, ಇ.ಎಂ.ವೇದಾವತಿ, ಗಿರೀಶ್ ಕಾರ್ತಿಕೇಯನ್, ತಿಪ್ಪೇಶ, ವಿ.ಎಸ್.ಹೂವಣ್ಣ, ಎ.ಬಿ.ಪ್ರಶಾಂತ್, ಕೆ.ಟಿ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT