ಶನಿವಾರ, ಏಪ್ರಿಲ್ 1, 2023
32 °C

ಕೊಲೆ ಪ್ರಕರಣ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ದಲ್ಲಿ ಈಚೆಗೆ ನಡೆದಿದ್ದ ನಾಗರಾಜ ನಾಯ್ಕ ಕೊಲೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ದಾವಣಗೆರೆ ತಾಲ್ಲೂಕಿನ ಅಣಜಿಗೊಲ್ಲರಹಟ್ಟಿ ಗ್ರಾಮದ ಆರೋಪಿ ಈರಣ್ಣ (70) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್‌ ಇನ್‌ಸ್ಪೆಕ್ಟರ್‌ ಕೆ.ಯೋಗೀಶ್‌, ಪಿಎಸ್‌ಐ ಜಿ.ಕೆ.ಬಸವರಾಜ್‌ ನೇತೃತ್ವದ ತಂಡದವರು ಕೊಲೆ ಪ್ರಕರಣದ ಜಾಡು ಹಿಡಿದು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ತಂಡವು ನಾಗರಾಜ ನಾಯ್ಕನ ಜತೆಯಲ್ಲಿ ಕೆಲಸ ಮಾಡು ತ್ತಿದ್ದ ನಾಗಣ್ಣ ಮತ್ತು ಇತರ ಇಬ್ಬರನ್ನು ಹಿಡಿದು ವಿಚಾರಣೆ ನಡೆಸಿದಾಗ ಕೃತ್ಯದ ಸುಳಿವು ಸಿಕ್ಕಿದೆ.

‘ಈರಣ್ಣ ಆ. 22ರಂದು ರಾತ್ರಿ ನಾಗರಾಜ ನಾಯ್ಕನನ್ನು ಕಲ್ಲು ಎತ್ತಿ ಹಾಕಿ ಹತ್ಯೆಗೈದು, ಗೋಣಿ ಚೀಲಕ್ಕೆ ತುಂಬಿ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟ ಎಂದು ನಾಗಣ್ಣ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಏನಿದು ಪ್ರಕರಣ: ದಾವಣಗೆರೆ ತಾಲ್ಲೂಕಿನ ಲಕ್ಷ್ಮಿಪುರ ತಾಂಡ್ಯಾದ ನಾಗರಾಜ ನಾಯ್ಕ (50) ಎಂಬಾತ ನನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅಜ್ಜಂಪುರದ ಟಿ.ಎಚ್‌. ರಸ್ತೆಯ ಕಿರಾಳಮ್ಮ ದೇವರ ತೇರುಮನೆ ಸಮೀಪ ಬಸ್‌ ನಿಲ್ದಾಣದ ಪಕ್ಕದ ಪೆಟ್ಟಿಗೆ ಅಂಗಡಿ ಬಳಿ ಆ.23ರಂದು ಶವ ಪತ್ತೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.