ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ ಉತ್ಸವಕ್ಕೆ ಶೃಂಗೇರಿ ಸಜ್ಜು

ಶಾರದಾ ಮಠ: ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
Last Updated 27 ಸೆಪ್ಟೆಂಬರ್ 2019, 9:30 IST
ಅಕ್ಷರ ಗಾತ್ರ

ಶೃಂಗೇರಿ: ಶೃಂಗೇರಿ ಶಾರದಾ ಮಠದಲ್ಲಿ ಶಾರದಾ ದೇವಿಗೆ ಇದೇ 28ರಿಂದ ಅ.9ರ ವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಶೃಂಗೇರಿಯಲ್ಲಿ ನಡೆಯುವ ಎಲ್ಲಾ ಉತ್ಸವಗಳಲ್ಲೂ ಶಿಖರ ಪ್ರಾಯವಾಗಿರುವ ನವರಾತ್ರಿ ಉತ್ಸವದಲ್ಲಿ ದೇಶವಿದೇಶದ ಜನರು ಭಾಗವಹಿಸುವುದು ವಿಶೇಷವಾಗಿದೆ.

28ರಂದು ಭಾದ್ರಪದ ಕೃಷ್ಣ ಅಮಾವಾಸ್ಯೆಯಂದು ಶಾರದಾಂಬಾ ಮಹಾಭಿಷೇಕ ನಡೆಯಲಿದೆ. ಜಗತ್ಪ್ರಸೂತಿ ಅಲಂಕಾರದಲ್ಲಿ ಶಾರದೆ ಕಂಗೊಳಿಸುತ್ತಾಳೆ. 29 ರಂದು ಶಾರದಾ ಪ್ರತಿಷ್ಠೆ ಹಾಗೂ ಬ್ರಾಹ್ಮೀ ಅಲಂಕಾರ, ಸೆ.30 ರಂದು ಹಂಸವಾಹಿನಿ ಅಲಂಕಾರ, ಅ.1 ರಂದು ವೃಷಭವಾಹನಾಲಂಕಾರ, 2ರಂದು ಮಯೂರ ವಾಹನಾಲಂಕಾರ, 3ರಂದು ಗರುಡ ವಾಹನಾಲಂಕಾರ, ಶತಚಂಡಿಯಾಗದ ಪ್ರಯುಕ್ತ ಶಾಲಾ ಪ್ರವೇಶ, ಪುರಶ್ಚರಣಾ ಹೋಮ ನಡೆಯಲಿದೆ.

ಅ.4ರಂದು ಮೋಹಿನಿ ಅಲಂಕಾರ, 5ರಂದು ಸರಸ್ವತ್ಯಾವಾಹನೆ ಮತ್ತು ವೀಣಾ ಶಾರದಾಲಂಕಾರ, 6ರಂದು ರಾಜರಾಜೇಶ್ವರಿ ಅಲಂಕಾರ, 7ರಂದು ಮಹಾನವಮಿ, ಶತಚಂಡಿಯಾಗದ ಪೂರ್ಣಾಹುತಿ, ಗಜಾ, ಅಶ್ವಪೂಜೆ ಮತ್ತು ಶಾರದೆಗೆ ಚಾಮುಂಡಿ ಅಲಂಕಾರ, 8ರಂದು ಗಜಲಕ್ಷ್ಮೀ ಅಲಂಕಾರ, ವಿಜಯದಶಮಿ ಪ್ರಯುಕ್ತ ಶಾರದೆಯ ಸನ್ನಿಧಿಯಲ್ಲಿ ಲಕ್ಷ್ಮೀ ಹೃದಯ ಹೋಮ, ರಾಮಪಟ್ಟಾಭೀಷೇಕ ಸರ್ಗ ಪಾರಾಯಣ, ಸಂಜೆ ವಿಜಯೋತ್ಸವ, ಶಮೀಪೂಜೆ ನಡೆಯಲಿದೆ. 9ರಂದು ಗಜಲಕ್ಷ್ಮೀ ಅಲಂಕಾರ, ಶಾರದಾಂಬಾ ರಥೋತ್ಸವ ಹಾಗೂ ಮಠದ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀತೀರ್ಥ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು: ಪ್ರತಿಪತ್ತಿನಿಂದ ನವಮಿ ತನಕ ಪ್ರತಿ ನಿತ್ಯ ವೇದಪುರಾಣೇತಿಹಾಸಭಾಷ್ಯ ಪಾರಾಯಣಗಳು, ಉಭಯ ಗುರುಗಳವರಿಂದ ಶಾರದೆಗೆ ವಿಶೇಷ ಪೂಜೆ, ಬೀದಿ ಉತ್ಸವ, ರಾತ್ರಿ ಉಭಯ ಗುರುಗಳ ಕಿರೀಟಧಾರಿಗಳಾಗಿ ಸಿಂಹಾಸನಾರೋಹಣ, ಶಾರದಾಂಬೆಯ ದಿಂಡೀ ಉತ್ಸವ, ಮಹಾಮಂಗಳಾರತಿ, ಅಷ್ಟಾವಧಾನಸೇವೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT