ಆಲ್ದೂರು: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಆಲ್ದೂರು, ವಸ್ತಾರೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ರಸ್ತೆ ಮತ್ತು ಇನ್ನಿತರ ಕಾಮಗಾರಿಗಳಿಗೆ ಶಾಸಕಿ ನಯನಾ ಮೋಟಮ್ಮ ಬುಧವಾರ ಭೂಮಿಪೂಜೆ ನೆರವೇರಿಸಿದರು.

₹3 ಕೋಟಿ ವೆಚ್ಚದಲ್ಲಿ ಕೆಳಗೂರು ಪಂಚಾಯಿತಿ ವ್ಯಾಪ್ತಿಯ ಹಾಂದಿಯಿಂದ ಬಸ್ಕಲ್ ಸಂಪರ್ಕ ರಸ್ತೆ ಕಾಮಗಾರಿ, ₹1 ಕೋಟಿ ವೆಚ್ಚದಲ್ಲಿ ಆಲ್ದೂರು ಹೋಬಳಿ ಬಳಿ ಹದಗೆಟ್ಟಿದ್ದ ರಸ್ತೆ ಅಭಿವೃದ್ಧಿ, ₹29 ಲಕ್ಷ ವೆಚ್ಚದಲ್ಲಿ ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಡ ಗೋಡು ಸರ್ಕಾರಿ ಶಾಲೆ ಅಭಿವೃದ್ಧಿ ಸೇರಿದಂತೆ ₹1 ಕೋಟಿ ವೆಚ್ಚದಲ್ಲಿ ಆಣೂರು ತೋರಣ ಮಾವು ರಸ್ತೆ ಕಾಮ ಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ‘ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಬದ್ಧರಾಗಿದ್ದು, ಹಂತ ಹಂತವಾಗಿ ಇನ್ನಷ್ಟು ರಸ್ತೆ ಮತ್ತು ಇನ್ನಿತರ ಕಾಮಗಾರಿ ಕೈಗೊಳ್ಳಲಾಗುವುದು’ ಎಂದರು.

ಬ್ಲಾಕ್ ಅಧ್ಯಕ್ಷ ಮುದಾಬಿರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಹವ್ವಳ್ಳಿ, ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಶ್ರಫ್, ಆಲ್ದೂರು ಹೋಬಳಿ ಅಧ್ಯಕ್ಷ ಡಿ.ಆರ್.ಪೂರ್ಣೇಶ್, ಕಾರ್ಯದರ್ಶಿ ರವಿಚಂದ್ರ, ಗ್ರಾ.ಪಂ. ಅಧ್ಯಕ್ಷೆ ಜುಬೇದಾ ಹಸೈನರ್, ಉಪಾಧ್ಯಕ್ಷ ಭರತ್ ಎ.ಬಿ., ಪಿಡಿಒ ಶಂಶುನ್ ನಹರ್, ಸದಸ್ಯರಾದ ನವರಾಜು ಎಚ್., ಮಮತಾ ಗುರು ಮೂರ್ತಿ, ಸರೋಜಾ ಮಂಜುನಾಥ್, ವಸ್ತಾರೆ ಹೋಬಳಿ ಅಧ್ಯಕ್ಷ ದಿಣ್ಣೆಕೆರೆ ಪೂರ್ಣೇಶ್, ಎಂಜಿನಿಯರ್ ರವಿ ಕುಮಾರ್, ಗುತ್ತಿಗೆದಾರ ಎ.ಯು.ಇಬ್ರಾಹಿಂ, ಚಿಕ್ಕಮಾಗರವಳ್ಳಿ ಬಲರಾಮ್, ಮುಳ್ಳುಂಡೆ ಮಂಜುನಾಥ್, ಈರೇಗೌಡ, ಅನುಪ್ ಗೌಡ ತುಡುಕೂರು, ರಮೇಶ್ ಆಚಾರ್ಯ, ಸತ್ತಿಹಳ್ಳಿ ಯೋಗೇಶ್, ವಸಂತ್, ಪೆಟ್ರೋಲ್ ಬಂಕ್ ಮಾಲೀಕ ಸಾರ್ಥಕ್, ನೂರ್ ಮಹಮ್ಮದ್, ಜೀವನ್ ಇದ್ದರು.

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲು ಸೂಚನೆ

ಮೂಡಿಗೆರೆ: ‘ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು’ ಎಂದು ಶಾಸಕಿ ನಯನಾ ಮೋಟಮ್ಮ ಸೂಚಿಸಿದರು.

ತಾಲ್ಲೂಕಿನ ಬಣಕಲ್ ಗ್ರಾಮದ ಸಬ್ಲಿಯಲ್ಲಿ ಬುಧವಾರ ₹30 ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಾಮಗಾರಿಗಳನ್ನು ದೀರ್ಘಕಾಲಕ್ಕೆ ಬಾಳಿಕೆ ಬರುವಂತೆ ನಿರ್ವಹಿಸಬೇಕು. ಗ್ರಾಮಗಳಲ್ಲಿ ನಡೆಯುವ ಕಾಮಗಾರಿ ಉತ್ತಮ ಗುಣಮಟ್ಟದ್ದಾಗಿರುವಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಕಳಪೆಯಾದರೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನೇ ಹೊಣೆ ಮಾಡಲಾಗುವುದು’ ಎಂದರು. ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ದಯಾನಂದ್, ರಾಮಕೃಷ್ಣ, ಕಾಂಗ್ರೆಸ್ ಬಣಕಲ್ ಹೋಬಳಿ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ತ್ರಿಪುರ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೋ, ವಿಜೇಂದ್ರ ಭಿನ್ನಾಡಿ, ಸಬ್ಲಿ ದೇವರಾಜ್, ವಿಜೇಂದ್ರ ತರುವೆ, ರಂಜಿತ್ ಕೋಗಿಲೆ, ಅರುಣ್ ಗುತ್ತಿ, ವಿನಯಕುಮಾರ್, ಸುಶೀಲಾ, ಜರೀನಾ, ಗೋಪಾಲ, ಸ್ವರೂಪ, ಪ್ರಶಾಂತ, ಮಧುಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.