ಚಿಕ್ಕಮಗಳೂರು: ಉದ್ಯಮಿ ಒಕ್ಕಲಿಗ ಸಂಘಟನೆಯ ರಾಜ್ಯ ಘಟಕದಿಂದ ಜ.9, 10 ಮತ್ತು 11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ಪೊ–2026’ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷ ಜೆ.ಪಿ.ಕೃಷ್ಣೇಗೌಡ ತಿಳಿಸಿದರು.

ಒಕ್ಕಲಿಗರು ಕೇವಲ ಗ್ರಾಹಕರಾಗಿ ಉಳಿಯದೆ ಉತ್ಪಾದಕರು ಮತ್ತು ಮಾರಾಟಗಾರರನ್ನಾಗಿ ಬೆಳೆಸುವುದು ಹಾಗೂ ಸಮುದಾಯದ ಯುವ ಜನರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶ. ನವೋದ್ಯಮದಲ್ಲಿ ತೊಡಗಿಸಲು ಈ ಎಕ್ಸ್ಪೊ ಅನುಕೂಲವಾಗಲಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕೃಷಿ, ಆರೋಗ್ಯ, ಶಿಕ್ಷಣ ಸೇರಿ ಔದ್ಯಮಿಕ ಕ್ಷೇತ್ರದ 11 ವಲಯಗಳಲ್ಲಿ ಅವಕಾಶಗಳನ್ನು ಗುರುತಿಸಲಾಗುವುದು. ಮೂರು ದಿನಗಳ ಮೇಳದಲ್ಲಿ ಒಕ್ಕಲಿಗ ಉದ್ಯಮಿಗಳು ತಮ್ಮ ಉತ್ಪನ್ನ ಹಾಗೂ ಸೇವೆಗಳನ್ನು ಪ್ರದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಯಶಸ್ವಿ ಉದ್ದಿಮೆದಾರರೊಂದಿಗೆ ಯುವ ಜನರನ್ನು ಪರಸ್ಪರ ಸಹಕಾರದೊಂದಿಗೆ ಉದ್ದಿಮೆಯತ್ತ ಸೆಳೆಯವುದು ಮತ್ತು ಮಾಹಿತಿ ಹಂಚಿಕೊಳ್ಳುವ ಪ್ರಕ್ರಿಯೆಯಾಗಿದೆ. ಜಿಲ್ಲೆಯ ಎಲ್ಲಾ ಒಕ್ಕಲಿಗ ಬಂಧುಗಳು ಎಕ್ಸ್ಪೊದಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ಒಕ್ಕಲಿಗ ಜಿಲ್ಲಾ ಸಮಿತಿಯ ವರ್ಷ, ಮಹೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.