ಕಡೂರು: ‘ತರಬೇತಿ ಹೊಂದಿ ಜವಾಬ್ದಾರಿ ನಿರ್ವಹಿಸಲು ಹೊಸಹೆಜ್ಜೆ ಇಡುತ್ತಿರುವ ಪೊಲೀಸ್ ಪ್ರಶಿಕ್ಷಣಾರ್ಥಿಗಳು ದಕ್ಷತೆಯಿಂದ ವೃತ್ತಿಯನ್ನು ಗೌರವಿಸಿ, ಆರೋಗ್ಯ ಮತ್ತು ಕುಟುಂಬದ ಕಡೆಗೂ ಲಕ್ಷ್ಯ ಕೊಡಬೇಕು’ ಎಂದು ತರಬೇತಿ ವಿಭಾಗದ ಎಡಿಜಿಪಿ ಅಲೋಕ್ಕುಮಾರ್ ಸಲಹೆ ನೀಡಿದರು.

ಕಡೂರು ಹೊರವಲಯದ ಗೆದ್ಲೆಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಬುಧವಾರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ವೀಕ್ಷಿಸಿ, ಅತ್ಯುತ್ತಮ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ಸಮಸ್ಯೆ ಇಲ್ಲದ ಜನರಿಲ್ಲ, ತರಬೇತಿ ಸಂದರ್ಭದಲ್ಲಿ ಕಲಿತ ವೃತ್ತಿಪರ ವಿಧಾನಗಳನ್ನು ಅನುಸರಿಸಿ ಒತ್ತಡ ನಿರ್ವಹಣೆ ಮೂಲಕ ಸವಾಲುಗಳನ್ನು ಎದುರಿಸಬೇಕು. ಮೈ–ಮನಸ್ಸು ಕಲಿಕಾ ಸಂದರ್ಭದಲ್ಲಿ ಗಟ್ಟಿಯಾಗಿದ್ದು, ಸೇವೆಯ ನಡುವೆಯೂ ಯೋಗ, ವ್ಯಾಯಾಮಕ್ಕೆ ಕನಿಷ್ಠ 45 ನಿಮಿಷ ಮೀಸಲಿಟ್ಟು ಮಾನಸಿಕ ಮತ್ತು ದೈಹಿಕ ಆರೋಗ್ಯದ ರಕ್ಷಣೆಗೂ ಒತ್ತುಕೊಡಬೇಕು. ಅಪರಾಧ ಕೃತ್ಯಕ್ಕೆ ಸಹಕರಿಸುವುದಿಲ್ಲ, ಸಮಾಜಕ್ಕೆ ಮಾದರಿಯಾಗಿ ಬದುಕುತ್ತೇವೆ ಎನ್ನುವ ಪ್ರತಿಜ್ಞೆಗಳನ್ನೂ ಮಾಡಿರಿ. ಸಮಾಜದ ಲೋಪ ದೋಷಗಳನ್ನು ತಿದ್ದಲು ಪ್ರಯತ್ನಿಸಿ. ನೀವು ಸದೃಢರಾಗಿದ್ದರೆ ಜನಜೀವನಕ್ಕೆ ಒಳಿತು ಮಾಡಲು ಸಾಧ್ಯ ಎನ್ನುವ ಎಚ್ಚರವಿರಲಿ’ ಎಂದು ಕಿವಿಮಾತು ಹೇಳಿದರು.

ಬೆಂಗಳೂರು ಉತ್ತರ ವಿಭಾಗದ ಪೈಪ್ಬ್ಯಾಂಡ್ ನೇತೃತ್ವದಲ್ಲಿ ರಾಷ್ಟ್ರಧ್ವಜ ಮತ್ತು ಪೊಲೀಸ್ ಧ್ವಜಕ್ಕೆ ಗೌರವವಂದನೆ ಸಲ್ಲಿಸಲಾಯಿತು.ತರಬೇತಿ ಕೇಂದ್ರದ ಡಿವೈಎಸ್ಪಿ ಮಲ್ಲಿಕಾರ್ಜುನ ಎಸ್.ಮರೋಳ ಮತ್ತು ಕಾರ್ಗಿಲ್ ವೀರ ವಿಠಲ್ ಶಿಂಧೆ ಅವರ ನೇತೃತ್ವದಲ್ಲಿ 488 ಪ್ರಶಿಕ್ಷಣಾರ್ಥಿಗಳು ಧ್ವಜ ಮತ್ತು ಅತಿಥಿಗಳಿಗೆ ಪೆರೇಡ್ ಮೂಲಕ ವಂದನೆ ಸಲ್ಲಿಸಿದರು. ಕೇಂದ್ರದ ಅಧೀಕ್ಷಕ ಪಿ.ಪಾಪಣ್ಣ ಪ್ರತಿಜ್ಞಾವಿಧಿ ಬೋಧಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಡಿಎಆರ್ನ ಹುಚ್ಚಪ್ಪ ಕ.ಕೆಂಚಣ್ಣನವರ್ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಗೌರವಕ್ಕೆ ಭಾಜನರಾದರೆ, ಹೊರಾಂಗಣ ವಿಭಾಗದಲ್ಲಿ ಮಂಡ್ಯ ಡಿಎಆರ್ನ ಚಂದನ ಎಂ., ಒಳಾಂಗಣ ವಿಭಾಗದಲ್ಲಿ ಹುಚ್ಚಪ್ಪ, ಫೈರಿಂಗ್ ವಿಭಾಗದಲ್ಲಿ ಮಂಗಳೂರು ಡಿಎಆರ್ನ ಅರುಣ್ ಅಟಪಟಕರ ಮೊದಲ ಬಹುಮಾನ ಪಡೆದರು.

ಪಶ್ಚಿಮ ವಲಯ ಐಜಿಪಿ ಅಮಿತ್ಸಿಂಗ್, ಐಮಂಗಲ ತರಬೇತಿ ಕೇಂದ್ರದ ಅಧೀಕ್ಷಕ ಎನ್.ಶ್ರೀನಿವಾಸ್, ಹಾಸನ ತರಬೇತಿ ಕೇಂದ್ರದ ನಾಗರಾಜ್, ವಿವಿಧ ಡಿವೈಎಸ್ಪಿ, ಇನ್ಸ್ಪೆಕ್ಟರ್, ಪಿಎಸ್ಐ ಅಧಿಕಾರಿ ವರ್ಗ, ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಪ್ರಶಿಕ್ಷಣಾರ್ಥಿಗಳ ಕುಟುಂಬದವರು, ತರಬೇತಿ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ನಾಗರಿಕರು ಭಾಗವಹಿಸಿದ್ದರು.

ಕಡೂರು ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡ 488 ಶಿಬಿರಾರ್ಥಿಗಳಲ್ಲಿ ಓರ್ವ ಎಂ.ಟೆಕ್ ಪದವಿ, 52 ಎಂಜಿನಿಯರಿಂಗ್ ಪದವೀಧರರು, 47 ಸ್ನಾತಕೋತ್ತರ ಪದವೀಧರರು, 338 ಪದವೀಧರರು, 10 ಡಿಪ್ಲೊಮಾ, 26 ಪಿಯು ಮತ್ತು ಓರ್ವ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿದವರು ಇದ್ದರು.

‘ಪ್ರಶಿಕ್ಷಣಾರ್ಥಿಗಳು ಸಮಾಜಕ್ಕೆ ಅಮೂಲ್ಯ ಆಸ್ತಿಯಾಗಲಿ’

ತರಬೇತಿ ಶಾಲೆಯ ಚಟುವಟಿಕೆಗಳ ಕುರಿತು ವರದಿ ವಾಚಿಸಿದ ಕೇಂದ್ರದ ಅಧೀಕ್ಷಕ ಪಿ.ಪಾಪಣ್ಣ ‘ಈವರೆಗೆ 7 ಸಿಪಿಸಿ 2 ಕೆಎಸ್ಐಎಫ್ಎಸ್ 4 ಎಪಿಸಿ ತಂಡಗಳ 3020 ಪ್ರಶಿಕ್ಷಣಾರ್ಥಿಗಳು 144 ಸಿಪಿಸಿ ಮತ್ತು ಎಪಿಸಿಗಳಿಗೆ ಬ್ರಿಜ್ಕೋರ್ಸ್ ತರಬೇತಿ 2850 ಪಿಎಸ್ಐ ಎಎಸ್ಐ ಹಾಗೂ ಸಿಎಚ್ಸಿಗಳಿಗೆ ಮುಂಬಡ್ತಿ ನಂತರದ ತರಬೇತಿ 5138 ಎಎಸ್ಐ ಸಿಎಚ್ಸಿ ಮತ್ತು ಸಿಪಿಸಿಗಳಿಗೆ ಪುನರ್ಮನನ ತರಬೇತಿ 3413 ಅಧಿಕಾರಿ ಮತ್ತು ಸಿಬ್ಬಂದಿಗೆ ವಿವಿಧ ವಿಷಯಗಳ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 2016ರಿಂದ ಈವರೆಗೆ 14565 ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇಂದು 2024ರ ಡಿಸೆಂಬರ್ನಿಂದ ರಾಜ್ಯದ 24 ಘಟಕಗಳ 488 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದು ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ನೀಡಿ ಎಲ್ಲ ಪ್ರಶಿಕ್ಷಣಾರ್ಥಿಗಳು ಇಲಾಖೆಗೆ ಮತ್ತು ಸಮಾಜಕ್ಕೆ ಅಮೂಲ್ಯ ಆಸ್ತಿಯಾಗಲಿ’ ಎಂದು ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.