ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತಮ ಆರೋಗ್ಯಕ್ಕೆ ಕ್ರೀಡಾ ಹವ್ಯಾಸ’

ತರೀಕೆರೆ ಬಯಲು ಜಂಗಿ ಕುಸ್ತಿಗೆ ಚಾಲನೆ; ಗಮನ ಸೆಳೆದ ಪೈಲ್ವಾನರ ಪಟ್ಟು
Last Updated 7 ಅಕ್ಟೋಬರ್ 2022, 6:13 IST
ಅಕ್ಷರ ಗಾತ್ರ

ತರೀಕೆರೆ: ಕ್ರೀಡಾ ಹವ್ಯಾಸ ಬೆಳೆಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಸಾಧ್ಯ ಎಂದು ಡಿವೈಎಸ್‌ಪಿ ನಾಗರಾಜು ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರದಲ್ಲಿ ರೇವಣಸಿದ್ದೇಶ್ವರ ಕುರುಬ ಸಮಾಜ, ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಬಯಲು ಜಂಗಿ ಕುಸ್ತಿ ಉದ್ಘಾಟಿಸಿ ಅವರು ಮಾತನಾಡಿದರು.

ಕುಸ್ತಿ ಪಟುಗಳು ಸ್ಪರ್ಧೆಯನ್ನು ಕ್ರೀಡಾ ಮನೋಭಾವನೆಯಿಂದ ತೆಗೆದುಕೊಳ್ಳಬೇಕು ಎಂದರು.

ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ದಾದಾಪೀರ್ ಮಾತನಾಡಿ, ಗ್ರಾಮೀಣ ಕ್ರೀಡೆಗಳಿಗೆ ಸರ್ಕಾರದ ಪೋತ್ಸಾಹ ಅಗತ್ಯ ಎಂದರು.

ಮುಖಂಡ ರಾಮಚಂದ್ರಪ್ಪ ಮಾತನಾಡಿ, ಇಂದಿನ ಯುವಕರು ದುಶ್ಚಟದಿಂದ ಹೊರ ಬರಲು ಕುಸ್ತಿ ಸಹಕಾರಿಯಾಗಿದೆ ಎಂದರು.

ಮುಖಂಡ ವಗ್ಗಯ್ಯ ಮಂಜುನಾಥ ಸರ್ಜಾ ಹನುಮಪ್ಪ ನಾಯಕ ಮಾತನಾಡಿ, ‘ಗರಡಿ ಮನೆಗಳನ್ನು ಯುವಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪುರಸಭೆ ಅಧ್ಯಕ್ಷೆ ಕಮಲ ರಾಜೇಂದ್ರ, ಉಪ ತಹಶೀಲ್ದಾರ್ ಗೋವಿಂದಪ್ಪ, ಮುಖ್ಯಾಧಿಕಾರಿ ಮಹಾಂತೇಶ್, ಪುರಸಭಾ ಸದಸ್ಯರಾದ ಲೋಕೇಶ್, ಅಶೋಕ ಆಚಾರ್, ಹಳಿಯೂರು ಕುಮಾರ್, ಮುಖಂಡರಾದ ರಂಗಪ್ಪ ಮಾತನಾಡಿದರು.

ಮಾಜಿ ಶಾಸಕ ಟಿ.ಎಚ್ .ಶಿವಶಂಕರಪ್ಪ, ಕುಸ್ತಿ ಸಂಘದ ಉಪಾಧ್ಯಕ್ಷ ಹರೀಶ್, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ಹಾಲವಜ್ರಪ್ಪ, ಕುರುಬ ಸಮಾಜದ ಅಧ್ಯಕ್ಷ ಡಿ.ವಿ.ಪದ್ಮರಾಜು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್.ರಮೇಶ್, ಪುರಸಭಾ ಸದಸ್ಯರಾದಟಿ.ಎಮ್.ಭೋಜ್ ರಾಜ್, ಪರಮೇಶ್, ಶಶಾಂಕ್, ರಘು, ಪಾರ್ವತಮ್ಮ, ರಂಗನಾಥ್, ಬಸವರಾಜ್, ಶಿವಮೂರ್ತಿ, ಸದಾನಂದ್, ಬೈಟು ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT