ಶುಕ್ರವಾರ, ಸೆಪ್ಟೆಂಬರ್ 25, 2020
24 °C

ಚಿಕ್ಕಮಗಳೂರು | ಮುಂದುವರಿದ ಮಳೆ, ರಸ್ತೆಗೆ ಉರುಳಿದ ಮರ, ಗದ್ದೆಗಳು ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಮತ್ತು ಗಾಳಿ ಮುಂದುವರಿದಿದೆ. ಬಾಳೆಹೊನ್ನೂರು ಬಳಿಯ ಹೆಗ್ಗದ್ದೆ ಸಮೀಪ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿದೆ. ಕೊಪ್ಪ ತಾಲ್ಲೂಕಿನ ಬಿಜೆಕಟ್ಟೆ ಬಳಿ ತೋಟ, ಗದ್ದೆಗಳು ಜಲಾವೃತವಾಗಿವೆ.

ಕೊಪ್ಪ ತಾಲ್ಲೂಕಿನ ನಾರ್ವೆ ಬಳಿ ತುಂಗಾ ನದಿ ನೀರು ರಸ್ತೆಗೆ ಹೊರಳಿದ್ದು ಕೊಪ್ಪ- ಜಯಪುರ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ಆರ್ಡಿಕೊಪ್ಪ ಭಾಗದಲ್ಲಿ ಗದ್ದೆ, ತೋಟಗಳಿಗೆ ನೀರು ನುಗ್ಗಿದೆ.

ಶೃಂಗೇರಿಯಲ್ಲಿ ಕುರುಬಗೇರಿ, ಭಾರತೀ ತೀರ್ಥ ರಸ್ತೆಗಳು ಜಲಾವೃತವಾಗಿವೆ. ಶೃಂಗೇರಿ- ಮಂಗಳೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಅರೇನೂರು ಗ್ರಾಮದ ತೋಟಗಳಲ್ಲಿ ನೀರು ನುಗ್ಗಿದೆ.  ಮಲೆನಾಡು ಭಾಗದ ಹಲವೆಡೆ ವಿದ್ಯುತ್ ಪೂರೈಕೆ ಕಡಿತವಾಗಿದೆ.


ಕೊಪ್ಪ ತಾಲ್ಲೂಕಿನ ಬಿಜೆಕಟ್ಟೆ ಬಳಿ ತೋಟ, ಗದ್ದೆಗಳು ಜಲಾವೃತವಾಗಿವೆ.

(ಇನ್ನಷ್ಟು ಮಾಹಿತಿ ಶೀಘ್ರ ಅಪ್‌ಡೇಟ್ ಆಗಲಿದೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು