ಶುಕ್ರವಾರ, ಡಿಸೆಂಬರ್ 3, 2021
26 °C

ಮಳೆ: ಹೊನ್ಮಮ್ಮನ ಹಳ್ಳದ ಸೇತುವೆ ಬದಿಯ ಮಣ್ಣು ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ ನಸುಕಿನಲ್ಲಿ ಉತ್ತಮ ಮಳೆಯಾಗಿದ್ದು, ತಾಲ್ಲೂಕಿನ ಗಿರಿಶ್ರೇಣಿಯ ಹೊನ್ನಮ್ಮನ ಹಳ್ಳ ಸೇತುವೆ ಬದಿಯ ಮಣ್ಣು ಕುಸಿದಿದೆ. 

ಕೆಳಗೆ ಇಳಿಯಲು ನಿರ್ಮಿಸಿರುವ ಮೆಟ್ಟಿಲುಗಳ (ದೇಗುಲದ ಮುಂಭಾಗ) ಬದಿಯ ಮಣ್ಣು ಕುಸಿದಿದೆ. ಗಿರಿ ಶ್ರೇಣಿ ಮಾರ್ಗದ ಮೈಲಿಮನೆ ಎಸ್ಟೇಟ್‌ ಬಳಿ ರಸ್ತೆ ಬದಿಯ ರಕ್ಷಣಾ ಗೋಡೆ ಜರಿದಿದೆ. ಮಣ್ಣು ಕುಸಿದಿದೆ. 

ಅತ್ತಿಗುಂಡಿ, ದತ್ತಪೀಠ ಸುತ್ತಮುತ್ತಲಿನ ಭಾಗದಲ್ಲಿ ರಭಸವಾಗಿ ಮಳೆ ಸುರಿದಿದೆ. ಚಿಕ್ಕಮಗಳೂರು ಮತ್ತು ಮೇಗರಮಕ್ಕಿ – 4, ಕಿಗ್ಗಾ– 3.6, ಅತ್ತಿಗುಂಡಿ – 3 ಸೆಂ.ಮೀ ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು