ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರ‍್ಯಾಲಿ ಆಫ್‌ ಚಿಕ್ಕಮಗಳೂರು’ ಆರಂಭ: ರಾಷ್ಟ್ರ ಮಟ್ಟದ ದ್ವಿಚಕ್ರ ವಾಹನ ರ‍್ಯಾಲಿ

Last Updated 21 ನವೆಂಬರ್ 2021, 2:52 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ದಿ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿರುವ ‘ರ‍್ಯಾಲಿ ಆಫ್‌ ಚಿಕ್ಕಮಗಳೂರು’ ರಾಷ್ಟ್ರ ಮಟ್ಟದ ದ್ವಿಚಕ್ರ ವಾಹನ ರ‍್ಯಾಲಿ ಶನಿವಾರ ಆರಂಭವಾಯಿತು.

ನಗರದ ಮೌಂಟೇನ್ ವ್ಯೂ ಶಾಲಾ ಆವರಣದಲ್ಲಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್‌ಎಂ.ಎಚ್ ಅವರು ರ‍್ಯಾಲಿಗೆ ಚಾಲನೆ ನೀಡಿದರು. ಪುಣೆ, ತ್ರಿಶೂರ್, ಬೆಂಗಳೂರು, ಕೋಯಮತ್ತೂರು, ಮೈಸೂರು, ಶಿವಮೊಗ್ಗ ಸಹಿತ ವಿವಿಧೆಡೆಯಿಂದ 50 ಸ್ಪರ್ಧಿಗಳು ಭಾಗವಹಿಸಿದ್ದರು.

ಮೌಂಟೇನ್ ವ್ಯೂ ಶಾಲಾ ಆವರಣದಲ್ಲಿ 1.8 ಕಿ.ಮೀ. ಟ್ರ್ಯಾಕ್ ಸಿದ್ಧ ಪಡಿಸಲಾಗಿತ್ತು.

ತುಂತುರು ಮಳೆ ಹಾಗೂ ಕೆಸರುಗಟ್ಟಿದ್ದ ರಸ್ತೆಯಲ್ಲಿ ಸ್ಪರ್ಧಿಗಳು ಬೈಕ್‌ ಚಲಾಯಿಸಿದರು. ಕೆಲ ಸ್ಪರ್ಧಿಗಳು ಬಿದ್ದರು. ಬೈಕ್‌ಗಳ ವೇಗ, ರೋಯ್‌ಗುಡುವ ಸದ್ದು, ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

ದಿ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಯಂತ್‌ ಪೈ, ಕಾರ್ಯದರ್ಶಿ ಅಭಿಜಿತ್‌ ಪೈ, ಸಂಯೋಜಕರಾದ ದೀಪಕ್‌, ಶ್ರೀಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT