ಚಿಕ್ಕಮಗಳೂರು: ನಗರದ ಬಸವನಹಳ್ಳಿ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ 136ನೇ ವರ್ಷದ ರಾಮನವಮಿ ಉತ್ಸವ ಏ.6 ರಿಂದ 16ರವರೆಗೆ ನಡೆಯಲಿದ್ದು, ಸಂಗೀತ, ನೃತ್ಯ, ಹರಿಕಥೆ ಹಮ್ಮಿಕೊಳ್ಳಲಾಗಿದೆ ಎಂದು ರಾಮೋತ್ಸವ ಸೇವಾ ಸಮಿತಿ ಅಧ್ಯಕ್ಷ ಕೆ.ಎನ್. ಪ್ರಭಾಕರ್ ತಿಳಿಸಿದರು.

ದೇಗುಲದಲ್ಲಿ ಪ್ರತಿನಿತ್ಯ ಬೆಳಿಗ್ಗೆ 7 ರಿಂದ 9 ರವರೆಗೆ ಸೂರ್ಯ ನಮಸ್ಕಾರ, ನವಗ್ರಹ ಜಪ, ರಾಮಾಯಣ ಮತ್ತು ವೇದ ಪಾರಾಯಣ ನಡೆಯಲಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏ.6ರಂದು ಬೆಳಿಗ್ಗೆ 9ಕ್ಕೆ ವಸಂತ ಸೇವೆ, ಸಂಜೆ 7:30ಕ್ಕೆ ವಿದುಷಿ ಸುಮಿತ್ರಾನಂದ್ ಅವರಿಂದ ಹರಿಕಥೆ, ಏ.7 ರಂದು ಸಂಜೆ 7ಕ್ಕೆ ಬೆಂಗಳೂರಿನ ವಿದ್ವಾನ್ ಲಕ್ಷ್ಮೀನಾರಾಯಣ ಭಟ್ ವೃಂದದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಏ.8 ರಂದು ಬೆಂಗಳೂರಿನ ವಿದುಷಿ ಸಂಸ್ಕೃತಿ ಕೃಷ್ಣ ಮತ್ತು ಸಂಗಡಿಗರಿಂದ ಭರತನಾಟ್ಯ, ಏ.9 ರಂದು ವಿದುಷಿ ಅಹಿಕಾ ನಾಗದೀಪ್ ತಂಡದವರಿಂದ ವೀಣಾವಾದನ, ಏ.10 ರಂದು ವಿದ್ವಾನ್ ಶ್ರೀಕಂಠಭಟ್ ಮತ್ತು ತಂಡದಿಂದ ಶಾಸ್ತ್ರೀಯ ಸಂಗೀತ, ಏ.11ರಂದು ಗಾಯಕ ವಿದ್ಯಾಭೂಷಣ ಅವರಿಂದ ಹಾಡುಗಾರಿಕೆ, ಏ.12 ರಂದು ವಿದ್ವಾನ್ ಎಂ.ಎಸ್.ದೀಪಕ್ ತಂಡದಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದರು.

ಏ.13 ರಂದು ಬೆಳಿಗ್ಗೆ 9ಕ್ಕೆ ರಾಮ ಪಟ್ಟಾಭಿಷೇಕ ನಡೆಯಲಿದೆ. ಗಮಕ ವಿದ್ವಾಂಸ ರಾಮಸುಬ್ರಾಯ ಶೇಟ್ ಉಪನ್ಯಾಸ ನೀಡಲಿದ್ದಾರೆ. ಏ.14ರಂದು ಸಂಜೆ 7 ಗಂಟೆಗೆ ಮೈಸೂರಿನ ವಿದ್ವಾನ್ ಹನುಮಂತರಾಜು ಸಂಗಡಿಗರಿಂದ ಲಯ, ನಾದ, ತಾಳ ವಾದ್ಯ ಕಚೇರಿ ಏರ್ಪಡಿಸಲಾಗಿದೆ. ಏ.15 ರಂದು ಮೈಸೂರಿನ ವಿದುಷಿ ಆರ್.ನಿತ್ಯಶ್ರೀ ವೃಂದದಿಂದ ಶಾಸ್ತ್ರೀಯ ಸಂಗೀತ, ಏ.16 ರಂದು ಚಿಕ್ಕಮಗಳೂರಿನ ಅರ್ಪಿತಾ ತಂಡದವರಿಂದ ಶಾಸ್ತ್ರೀಯ ಕಾರ್ಯಕ್ರಮದೊಂದಿಗೆ ರಾಮೋತ್ಸವ ಮುಕ್ತಾಯಗೊಳ್ಳಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಮೋತ್ಸವ ಸೇವಾ ಸಮಿತಿ ಕಾರ್ಯದರ್ಶಿ ಎನ್.ಆರ್.ರಾಮಕೃಷ್ಣ, ಪ್ರಸಾದ್, ಸೋಮಶೇಖರ್, ಗೋಪಿನಾಥ್, ಬಾಲಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.