ಚಾರ್ಮಾಡಿ ಕಣಿವೆಯ ಮಧುಗುಂಡಿಯಲ್ಲಿ ಪರಿಸರ ಅಧ್ಯಯನಕ್ಕೆ ಹೆಚ್ಚು ಅವಕಾಶವಿರುವುದು ಮತ್ತೆ ಸಾಬೀತಾಗಿದೆ. ಹಾಗಾಗಿ ಅಧ್ಯಯನ ಆಸಕ್ತಿ ಇರುವ ಅತಿಥಿಗಳಿಗೇ ಹೆಚ್ಚಿನ ಅವಕಾಶ ನೀಡುತ್ತಿದ್ದೇವೆ.
– ಶ್ರೀಜಿತ್, ರಿವರ್ ಮಿಸ್ಟ್ ಮುಖ್ಯಸ್ಥ
ಆರೋಗ್ಯಕರ ಪರಿಸರದ ಸೂಚಕ
‘ಅಧ್ಯಯನದ ಪ್ರಕಾರ, ಈ ಜೇಡಗಳು ನಿರ್ದಿಷ್ಟ ಆವಾಸಸ್ಥಾನದಲ್ಲಷ್ಟೇ ಜೀವಿಸುತ್ತವೆ ಎಂಬುದು ತಿಳಿಯುತ್ತದೆ. ಆವಾಸಸ್ಥಾನ ರಕ್ಷಿಸದಿದ್ದರೆ ಪ್ರಭೇದ ನಾಶವಾಗುವ ಸಾಧ್ಯತೆ ಇದೆ. ಇವು ಕೀಟ ನಿಯಂತ್ರಕವಾಗಿ ಕೆಲಸ ಮಾಡುತ್ತವೆ. ಇವುಗಳು ಇರುವಿಕೆ ಪಶ್ಚಿಮ ಘಟ್ಟ ರಕ್ಷಣೆಯ ಅಗತ್ಯವನ್ನು ಒತ್ತಿ ಹೇಳುತ್ತಿದೆ’ ಎಂದು ಅಜಿತ್ ಪಡಿಯಾರ್ ಪ್ರತಿಪಾದಿಸಿದರು.
‘ಮಧುಗುಂಡಿಯಲ್ಲಿ 2019ರಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ಗುಡ್ಡ ಸರಿದು ಮನೆಗಳು ಕುಸಿದಿದ್ದವು. ಇಂತಹ ಪ್ರದೇಶದಲ್ಲಿ ಹೊಸ ಪ್ರಭೇದದ ಜೇಡ ಕಾಣಿಸಿರುವುದು ಆರೋಗ್ಯಕರ ಪರಿಸರ ವ್ಯವಸ್ಥೆಯ ಸೂಚಕವಾಗಿದೆ’ ಎಂದು ಅಭಿಪ್ರಾಯಪಟ್ಟರು.