ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸೆ-ಎಳನೀರು-ಬೆಳ್ತಂಗಡಿ ರಸ್ತೆ ಅಭಿವೃದ್ಧಿ; ಶಾಸಕರಿಂದ ಸ್ಥಳ ಪರಿಶೀಲನೆ

Published 23 ಜನವರಿ 2024, 14:26 IST
Last Updated 23 ಜನವರಿ 2024, 14:26 IST
ಅಕ್ಷರ ಗಾತ್ರ

ಕಳಸ: ಸಂಸೆ-ಎಳನೀರು-ದಿಡುಪೆ ರಸ್ತೆ ಅಭಿವೃದ್ಧಿ ಬಗ್ಗೆ ಮೂಡಿಗೆರೆ ಮತ್ತು ಬೆಳ್ತಂಗಡಿ ಶಾಸಕರು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.

ಸಂಸೆಯಲ್ಲಿ ನಡೆದ ಜನಸಂಪರ್ಕ ಸಭೆಗೆ  ಬಂದಿದ್ದ ಶಾಸಕಿ ನಯನಾ ಮೋಟಮ್ಮ ಅವರು, ಆ ಸಭೆಗೂ ಮುನ್ನ ಎಳನೀರು ರಸ್ತೆ ವೀಕ್ಷಣೆಗೆ ತೆರಳಿದರು. ಆ ವೇಳೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕೂಡ ಸ್ಥಳಕ್ಕೆ ಬಂದರು. ಉಭಯ ಶಾಸಕರು ರಸ್ತೆ ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆದು ಚರ್ಚೆ ನಡೆಸಿದರು.

ಈ ರಸ್ತೆಯ ನಿರ್ಮಾಣದಿಂದ ಕಳಸ-ಬೆಳ್ತಂಗಡಿ ರಸ್ತೆ ಸಂಪರ್ಕವು ಹತ್ತಿರವಾಗುತ್ತದೆ. ನೂರಾರು ಜನರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್ ಮತ್ತು ಸ್ಥಳೀಯರು ಶಾಸಕರ  ಗಮನ ಸೆಳೆದರು.

5 ಕಿ.ಮೀ ಉದ್ದದ ಈ ರಸ್ತೆ ನಿರ್ಮಾಣದ ಅಗತ್ಯತೆ ಮತ್ತು ಮಹತ್ವದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಗಮನ ತಂದು ಅಗತ್ಯ ಕೆಲಸ ಮಾಡುವ ಬಗ್ಗೆ ಎರಡೂ ಶಾಸಕರು ಭರವಸೆ ನೀಡಿದರು. ಕಾಂಗ್ರೆಸ್ ಮುಖಂಡರಾದ ಶ್ರೇಣಿಕ, ರಾಜೇಂದ್ರ, ರಫೀಕ್, ವಿಶ್ವನಾಥ್, ವೀರೇಂದ್ರ, ಮಲವಂತಿಗೆ ಪಂಚಾಯಿತಿ ಸದಸ್ಯ ಪ್ರಕಾಶ್ ಎಳನೀರು ಇದ್ದರು.

ಸಂಸೆಯಲ್ಲಿ ನಡೆದ ಸಭೆಯಲ್ಲಿ ಕುದುರೆಮುಖ ಪೊಲೀಸ್ ಠಾಣೆಯನ್ನು ಸಂಸೆ ಗ್ರಾಮಕ್ಕೆ ಸ್ಥಳಾಂತರಿಸುವ ಬಗ್ಗೆ ಸ್ಥಳೀಯರು ಪ್ರಸ್ತಾಪ ಮಾಡಿದರು. ಪೊಲೀಸ್ ವರಿಷ್ಠಾಧಿಕಾರಿ ಕೂಡ ಸಂಸೆಯಲ್ಲಿ ಠಾಣೆ ನಿರ್ಮಾಣಕ್ಕೆ ಅಗತ್ಯ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದರು.

ರಾಜ್ಯ ರೈತ ಸಂಘದ ಕುದುರೆಮುಖ ಘಟಕದ ಸುರೇಶ್ ಭಟ್ ಮತ್ತಿತರರು ಮನವಿ ಸಲ್ಲಿಸಿ ಕುದುರೆಮುಖ ಠಾಣೆಯನ್ನು ಸಂಸೆಗೆ ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿದರು. ಕುದುರೆಮುಖ ಪಟ್ಟಣದ ಆಸುಪಾಸಿನಲ್ಲಿ ಬಹಳಷ್ಟು ಜನವಸತಿ ಪ್ರದೇಶ ಇದ್ದು ಸಂಸೆ ಬಹಳ ದೂರ ಆಗುತ್ತದೆ.ಕುದುರೆಮುಖದಲ್ಲೇ ಠಾಣೆ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT