ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ | ಭತ್ತ ನಾಟಿ ಮಾಡಿದ ಶಾಲಾ ಮಕ್ಕಳು

Published 22 ಆಗಸ್ಟ್ 2023, 13:25 IST
Last Updated 22 ಆಗಸ್ಟ್ 2023, 13:25 IST
ಅಕ್ಷರ ಗಾತ್ರ

ಕೊಪ್ಪ: ಮೇಲಿನ ಪೇಟೆಯಲ್ಲಿರುವ ಆರೂರು ಲಕ್ಷ್ಮೀನಾರಾಯಣ ರಾವ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಭತ್ತದ ಗದ್ದೆಯಲ್ಲಿ ನಾಟಿ ಮಾಡಿ, ಕೃಷಿ ಅನುಭವ ಪಡೆದುಕೊಂಡರು.

ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ನೌಕರ ಪ್ರಕಾಶ್ ಶೆಟ್ಟಿ ಅವರ ಗದ್ದೆಯಲ್ಲಿ ಪ್ರಾತ್ಯಕ್ಷಿಕೆ ನಡೆಯಿತು. ಶಾಲಾ ಮಕ್ಕಳು ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಕೆಸರಿನಲ್ಲಿ ಮಿಂದೆದ್ದರು. ಕೃಷಿ ಕಲೆಯ ಪ್ರತ್ಯಕ್ಷ ದರ್ಶನಕ್ಕೆ ಸಾಕ್ಷಿಯಾದರು.

ಅಮೃತ ಸಿಂಚನ ಟ್ರಸ್ಟ್‌ನ ಜಾನ್ ಪೆರಿಸ್, ಪ್ರಕಾಶ್ ಶೆಟ್ಟಿ, ಸತ್ಯಜಿತ್ ಶೆಟ್ಟಿ, ರತ್ನಾಕರ್, ಶಿವಾನಂದ್, ಹರೀಶ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಬ್ರೀನ್, ಮುಖ್ಯ ಶಿಕ್ಷಕ ಮಂಜುನಾಥ್, ಸಹ ಶಿಕ್ಷಕರಾದ ತಬಸುಮ್, ಮಂಗಳ, ಜಯಶ್ರೀ, ಹೀನ ಕೌಸರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT