ಚಿಕ್ಕಮಗಳೂರು: ವಿಜ್ಞಾನ ಇಂದು ನಿತ್ಯದ ಬದುಕಿನೊಂದಿಗೆ ಬೆಸೆದು ಹೋಗಿದೆ. ಎಲ್ಲರೂ ವಿಜ್ಞಾನದ ಅರಿವು ಪಡೆದುಕೊಳ್ಳವುದು ಮುಖ್ಯ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಹೇಳಿದರು.

ಜಿಲ್ಲಾ ಒಕ್ಕಲಿಗರ ಸಂಘದ ಕಲ್ಯಾಣ ಮಂಟಪದಲ್ಲಿ ಜೆವಿಎಸ್ ಶಾಲೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ವಸ್ತು ಪ್ರದರ್ಶನ, ಸಂಸ್ಕೃತಿ, ನಾಡು-ನುಡಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳು 5 ವರ್ಷಗಳಿಂದ ಜೆವಿಎಸ್ ಶಾಲೆಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಬೆಳಿಗ್ಗೆ ನಿದ್ರೆಯಿಂದ ಎದ್ದಾಗಿನಿಂದ ರಾತ್ರಿ ನಿದ್ರೆಗೆ ಜಾರುವ ತನಕ ವಿಜ್ಞಾನ ಕಣ ಕಣದಲ್ಲಿಯೂ ತುಂಬಿಕೊಂಡಿದೆ ಎಂದರು.

ಸಂಶೋಧನೆ ಮಾಡುವವರಿಗೆ ಹೊಸಾ ಆಲೋಚನೆಗಳ ಮೂಲಕ ಆವಿಷ್ಕಾರಗಳು ಹೊಳೆಯುತ್ತವೆ. ಈ ಕಲ್ಪನೆ ವಿದ್ಯಾರ್ಥಿ ದೆಸೆಯಿಂದಲೇ ಬೆಳಸಿಕೊಂಡರೆ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಂಘದ ಮಾಜಿ ಕಾರ್ಯದರ್ಶಿ ಎಂ.ಸಿ.ಪ್ರಕಾಶ್ ಮಾತನಾಡಿ, ‘ವಿಜ್ಞಾನವಿಲ್ಲದೆ ಮನುಷ್ಯ ಬದುಕಲಾರ. ವಿಜ್ಞಾನ ಇಂದು ಎಲ್ಲದರಲ್ಲೂ ಬೆರೆತಿದೆ. ಆಲೋಚನೆಗಳ ಸಂಗಮವೇ ವಿಜ್ಞಾನ’ ಎಂದರು.

ಸಂಘದ ಉಪಾಧ್ಯಕ್ಷ ಟಿ.ಡಿ.ಮಲ್ಲೇಶ್, ಕಾರ್ಯದರ್ಶಿ ಎಂ.ಎಸ್. ಪ್ರದೀಪ್ಕುಮಾರ್, ನಿರ್ದೇಶಕರಾದ ಲೋಕಪ್ಪಗೌಡ, ಅನಂತೇಗೌಡ, ಕೆ.ಪಿ.ರಾಜೇಂದ್ರ, ಕೆ.ಯು.ರತೀಶಕುಮಾರ್, ಹರಿಣಾಕ್ಷಿ ನಾಗರಾಜ್, ಎಂ.ಅಶೋಕ, ಎಂ.ಬಿ.ಸತೀಶ್, ಯು.ಪಿ.ಮನುಕುಮಾರ್, ಕೆ.ಪಿ.ಪೃಥ್ವಿರಾಜ್, ಎಚ್.ಕೆ.ನವೀನ್, ಐ.ಸಿ.ಶ್ರೀನಾಥ್, ಪಿ.ರಾಜು, ಎಚ್.ಎಸ್.ಮೋಹನ್, ಕೆ.ಬಿ.ಸಜಿತ್, ಸಿ.ಟಿ.ರೇವತಿ, ಎಂ.ಬಿ.ಸಂತೋಷ್, ಟಿ.ಎಂ.ಉಮಾಶಂಕರ್, ಟಿ.ಎಲ್.ಭವ್ಯ, ಪವಿತ್ರಾ, ಜೆ.ಪಿ.ಹೊಯ್ಸಳ, ಐ.ವಿ.ಮಂಜುಚೇತನ್, ಸಿಇಒ ಕುಳ್ಳೇಗೌಡ, ವ್ಯವಸ್ಥಾಪಕ ತೇಜಸ್ಮೂರ್ತಿ, ಮುಖ್ಯ ಶಿಕ್ಷಕ ವಿಜಿತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.