ಚಿಕ್ಕಮಗಳೂರು: ‘ಜಾತಿಗಣತಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಕೈಗೊಂಡಿರುವ ನಿರ್ಧಾರ ಉತ್ತಮ ಬೆಳವಣಿಗೆ ಎಂದು ರಂಭಾಪುರಿ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಆರ್. ಪಾಟೀಲ ತಿಳಿಸಿದರು.

ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಚಿಕ್ಕಮಗಳೂರಿಗೆ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೈಕಮಾಂಡ್ ಬಳಿ ಚರ್ಚೆ ಮಾಡಲು ಅನೇಕ ವಿಚಾರಗಳು ಬಾಕಿ ಉಳಿದಿದ್ದವು. ಈ ಹಿಂದೆಯೇ ಭೇಟಿ ನಿಗದಿಯಾಗಿತ್ತು. ಆದರೆ, ಸಮಯ ದೊರೆತಿರಲಿಲ್ಲ. ಭೇಟಿಯ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವರೇ ಮಾಹಿತಿ ನೀಡಿದ್ದಾರೆ. ಜಾತಿಗಣತಿ ಬಗ್ಗೆ ಕೆಲ ಸಲಹೆಗಳನ್ನು ಪಕ್ಷ ಕೊಟ್ಟಿದೆ. ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ’ ಎಂದರು.

ಇ.ಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು,‘ಕೇಂದ್ರ ಸರ್ಕಾರ ಸ್ವಾಯುತ್ತ ಸಂಸ್ಥೆಗಳನ್ನು ತನ್ನ ಮನಸ್ಸಿಗೆ ಬಂದಂತೆ ಬಳಕೆ ಮಾಡಿಕೊಳ್ಳುತ್ತಿದೆ. ಪ್ರಾಥಮಿಕ ವಿಚಾರಣೆ ನಡೆಸಿ ಬಹಳ ದಿನಗಳಾಗಿತ್ತು. ಈಗ ಮತ್ತೆ ಪ್ರಕರಣ ಜೀವಂತ ಇಡಲು ಹಾಗೂ ಪ್ರಚಾರ ಪಡೆಯಲು ದಾಳಿ ಮಾಡಿಸಿದೆ. ತನಿಖೆಗೆ ನಮ್ಮ ಶಾಸಕರು ಸಹಕಾರ ನೀಡುತ್ತಿದ್ದಾರೆ. ವಿರೋಧ ಪಕ್ಷಗಳನ್ನು ಹೆದರಿಸುವ ಪ್ರಯತ್ನ ಮಾಡುವುದೇ ಕೇಂದ್ರದ ಧೋರಣೆ. ಇಲ್ಲಿ ಹೆದರುವವರು ಯಾರೂ ಇಲ್ಲ’ ಎಂದರು.

‘ಲೋಕಸಭೆ ಚುನಾವಣೆಗೆ ₹42 ಕೋಟಿ ಖರ್ಚು ಮಾಡಿರುವ ಪತ್ರ ಸಿಕ್ಕಿದೆ ಎಂಬ ವಿಚಾರ ಇದೆ. ಲೋಕಸಭೆ ಚುನಾವಣೆಗೆ ₹42 ಕೋಟಿ ಯಾರು ಖರ್ಚು ಮಾಡುತ್ತಾರೆ?. ಈ ರೀತಿ ಏನೂ ಇರುವುದಿಲ್ಲ. ಸೃಷ್ಟಿ ಮಾಡುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.