ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆಗುಂಡಿಯಲ್ಲಿ ಮಿಸ್ಟರಿ ಸಿನಿಮಾ ಚಿತ್ರೀಕರಣ

Published 30 ನವೆಂಬರ್ 2023, 13:23 IST
Last Updated 30 ನವೆಂಬರ್ 2023, 13:23 IST
ಅಕ್ಷರ ಗಾತ್ರ

ಕುದುರೆಗುಂಡಿ(ಎನ್.ಆರ್.ಪುರ): ತಾಲ್ಲೂಕಿನ ಗಡಿಭಾಗದ ಕುದುರೆಗುಂಡಿಯಲ್ಲಿ ಗುರುವಾರ ನಿರ್ದೇಶಕ ಆಕಾಶ್ ಜೋಷಿ ನಿರ್ದೇಶನದ ಮಿಸ್ಟರಿ ಸಿನಿಮಾ ಚಿತ್ರೀಕರಣವು ನಡೆಯಿತು.

ಕುದುರೆಗುಂಡಿಯ ಮುಖ್ಯ ರಸ್ತೆಯಲ್ಲಿ ಹಾಡಿನ ಚಿತ್ರೀಕರಣ ಹಾಗೂ ಬಸ್ ನಿಲ್ದಾಣದ ಮುಂಭಾಗದ ಹೋಟೆಲ್ ನಲ್ಲಿ ಕೆಲವು ಸನ್ನಿವೇಶದ ಚಿತ್ರೀಕರಣ ನಡೆಯಿತು.

ಮಿಸ್ಟರಿ ಸಿನಿಮಾ ನಿರ್ದೇಶಕ ಆಕಾಶ್ ಜೋಷಿ ಮಾತನಾಡಿ, ಈ ಸಿನಿಮಾದ ಮೂಲಕ ಪ್ರಥಮ ಬಾರಿಗೆ ನಿರ್ದೇಶಕ ನಾಗಿ ಕೆಲಸ ಮಾಡುತ್ತಿದ್ದೇನೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಕಥೆಯನ್ನು ಆಯ್ದುಕೊಳ್ಳಲಾಗಿದೆ. ಸುನೀಲ್ ಹಾಗೂ ಆಕಾಶ ಪ್ರಭು ನಾಯಕ ನಟರಾಗಿದ್ದಾರೆ.ನಾಯಕಿಯಾಗಿ ಅಲೇನ ಹಾಗೂ ಗಟ್ಟಿ ಮೇಳದ ಧಾರವಾಹಿಯ ಆರತಿ ಪಡುಬಿದ್ರಿ, ಪ್ರಶಾಂತ ಸಂಬರಿಗಿ, ಮನೋಜ್, ರಾಜೇಶ್ ನಟಿಸಿದ್ದಾರೆ. ತೇಜಸ್ ಹಾಗೂ ಆಕಾಶ್ ಜೋಷಿ ಛಾಯಾಗ್ರಾಹಣ ಮಾಡುತ್ತಿದ್ದಾರೆ’ ಎಂದರು.

ನಾಟಕ ನಟ ಸುನೀಲ್ ಮಾತನಾಡಿ, ‘ಕಥೆ ತುಂಬಾ ಚೆನ್ನಾಗಿದೆ. ಚಲನಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಪ್ರೋತ್ಸಾಹ ನೀಡಬೇಕು ಎಂದರು.ನಟಿ ಆರತಿ ಪಡುಬಿದ್ರಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT