ಬುಧವಾರ, ಜನವರಿ 20, 2021
28 °C

‘ನಾನು ಎಸ್‌ಟಿ ಮೀಸಲಾತಿವಿರೋಧಿಯಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಜ್ಜಂಪುರ: ‘ನಾನು ಎಸ್‌ಟಿ ಮೀಸಲಾತಿಯ ವಿರೋಧಿಯಲ್ಲ. ಈಗಿರುವ ಎಸ್‌ಟಿ ಮೀಸಲಾತಿಯನ್ನು ಶೇ 25ಕ್ಕೆ ಏರಿಸಬೇಕು. ಅದರಲ್ಲಿ ಕುರುಬರಿಗೆ ಶೇ 7.5 ನಿಗದಿಗೊಳಿಸಬೇಕು ಎಂಬುದು ನನ್ನ ಆಶಯ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ಗುರುವಾರ ನಡೆದ ಕನಕ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುಲಶಾಸ್ತ್ರ ಅಧ್ಯಯನ ನಡೆ
ಯುತ್ತಿದೆ. ಅದು ಪೂರ್ಣಗೊಂಡ ಬಳಿಕ ಎಸ್‌ಟಿ ಮೀಸಲಾತಿಗೆ ಆಗ್ರಹಿಸೋಣ ಎಂದಿದ್ದೇನೆ’ ಎಂದರು.

‘ಪ್ರಧಾನಮಂತ್ರಿ ಆದರೂ, ಸಾಮಾಜಿಕ ನ್ಯಾಯ ಬಿಟ್ಟು ರಾಜಕೀವಾಗಿ ಒಂದು ತೀರ್ಮಾನವನ್ನೂ ಮಾಡಲ್ಲ’ ಎಂದರು. ‘ವಯಸ್ಸಾದ, ಬರಡು ರಾಸು
ಗಳನ್ನು ಮಾರಾಟ ಮಾಡಬೇಡಿ, ಕೊಲ್ಲ
ಬೇಡಿ ಎಂದರೆ, ಅವುಗಳನ್ನು ಸಾಕುವವ
ರಾರು? ಈ ಬಗ್ಗೆ ಮಾತನಾಡಿದರೆ ಸಿದ್ದರಾಮಯ್ಯ ಗೋಮಾತೆ ವಿರೋಧಿ ಎನ್ನುತ್ತಾರೆ. ಆದರೆ, ನಮ್ಮ ಮನೆಯಲ್ಲೂ ಸಂಕ್ರಾಂತಿಯಂದು ಗೋಪೂಜೆ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.