ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀತಾವನ ಹಿತರಕ್ಷಣಾ ಹೋರಾಟ ಸಮಿತಿ ಅಸ್ತಿತ್ವಕ್ಕೆ

Published 26 ಜನವರಿ 2024, 13:15 IST
Last Updated 26 ಜನವರಿ 2024, 13:15 IST
ಅಕ್ಷರ ಗಾತ್ರ

ಜಯಪುರ(ಬಾಳೆಹೊನ್ನೂರು); ಖಾಸಗಿ ವ್ಯಕ್ತಿಗಳ ಹಿಡಿತದಲ್ಲಿರುವ ‘ಸೀತಾವನ’ವನ್ನು ಸಾರ್ವಜನಿಕರಿಗೆ ನೋಡಲು ಮುಕ್ತ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ‘ಸೀತಾವನ ಹಿತರಕ್ಷಣಾ ಹೋರಾಟ ಸಮಿತಿ’ಯನ್ನು ರಚಿಸಲಾಗಿದೆ ಎಂದು ಹಿಂದೂಪರ ಸಂಘಟಕ ಅಣ್ಣು ಮಂಜುನಾಥ್ ಹೇಳಿದರು.

ಚೌಡಿಕಟ್ಟೆಯ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಖಾಸಗಿ ಎಸ್ಟೇಟ್ ಮಾಲೀಕರು ಸೀತಾವನ ವೀಕ್ಷಣೆಗೆ ಅವಕಾಶ ನೀಡದೆ ತಕರಾರು ತೆಗೆದಿದ್ದಾರೆ. ಈ ಬಗ್ಗೆ ಮಾಲೀಕರ ಜೊತೆ ಸಂಘಟಕರು ಚರ್ಚಿಸಿದರೂ ಸಕಾರಾತ್ಮಕ ಫಲಿತಾಂಶ ದೊರೆತಿಲ್ಲ. ಇದರಿಂದಾಗಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ.ಇದನ್ನು ಹಿಂದಿನಂತೆಯೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸೀತಾವನ ಹಿತರಕ್ಷಣಾ ಹೋರಾಟ ಸಮಿತಿ ರಚಿಸಲಾಗಿದ್ದು ಹೋರಾಟದ ಮೂಲಕ ಹಿಂದೂಗಳ ಧಾರ್ಮಿಕ ಕೇಂದ್ರ ಉಳಿಸಲು ಯತ್ನಿಸಲಾಗುವುದು’ ಎಂದರು.

ಸೀತಾವನ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷರಾಗಿ ಕೇಶವ್, ಶ್ರೀಧರ್, ಸೋಮಶೇಖರ್ (ಉಪಾಧ್ಯಕ್ಷರು),ಮಂಜುನಾಥ್, ಅಣ್ಣು,(ಕಾರ್ಯದರ್ಶಿ),ಸಂಪತ್ ಕುಮಾರ್ (ಸಹಕಾರ್ಯದರ್ಶಿ), ಎ.ಎಸ್.ಪ್ರಸನ್ನ(ಖಜಾಂಚಿ) ಅನಿಲ್‍ಗೌಡ, ಮಾನಪ್ಪಗೌಡ (ಗೌರವಾಧ್ಯಕ್ಷರು) ಹಾಗೂ 20 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT