ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಿತಿ ಕೆಲ ಸದಸ್ಯರಿಂದ ಲೋಪ: ಆರೋಪ

ಚಿಕ್ಕಮಗಳೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಿ.ಸುಬ್ರಹ್ಮಣ್ಯ
Last Updated 5 ಅಕ್ಟೋಬರ್ 2021, 16:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಮಕ್ಕಳ ಕಲ್ಯಾಣ ಸಮಿತಿಯ ಕೆಲ ಸದಸ್ಯರು ಏಳು ಪ್ರಕರಣಗಳಲ್ಲಿ ಪ್ರಭಾವ ಬೀರಿ
ಲೋಪ ಎಸಗಿದ್ದಾರೆ’ ಎಂದು ಸಮಿತಿ ಅಧ್ಯಕ್ಷ ಜಿ. ಸುಬ್ರಹ್ಮಣ್ಯ ಇಲ್ಲಿ ಮಂಗಳವಾರ ಆರೋಪಿಸಿದರು.

‘ಲೋಪದ ಬಗ್ಗೆ ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದೇನೆ. ಜಿಲ್ಲಾಧಿಕಾರಿ ಕೂಲಂಕಷವಾಗಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

‘ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಸದಸ್ಯರೊಬ್ಬರು ಪ್ರಭಾವ ಬೀರಿ ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ದಾಖಲಾಗುವು ದನ್ನು ತಪ್ಪಿಸಿದ್ದಾರೆ. ಬಾಲಕಿಗೆ ಅನ್ಯಾಯ ಎಸಗಿದ್ದಾರೆ. ಆಟೊ ರಿಕ್ಷಾ ಚಾಲಕನೊಬ್ಬ ಅನುಚಿತವಾಗಿ ವರ್ತಿಸಿದ ಪ್ರಕರಣ ದಾಖಲಾಗಿತ್ತು. ಬಾಲಕಿಯ ಹೇಳಿಕೆಯನ್ನೂ ದಾಖಲಿಸಿ ಕೊಳ್ಳಲಾಗಿದ್ದರೂ ಸದಸ್ಯರು ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ’ ಎಂದರು.

‘ಲೈಂಗಿಕ ದೌರ್ಜನ್ಯ, ಬಾಲಕಿ ಗರ್ಭಿಣಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಎಫ್‌ಐಆರ್‌ ದಾಖಲಿಸಲು ತಿಳಿಸಿದ್ದೆ. ಸಮಿತಿ ಸದಸ್ಯರು ಎಫ್‌ಐಆರ್‌ ದಾಖಲಿಸಲು ಪತ್ರ ಕಳಿಸುವುದು ಬೇಡ ಎಂದು ಸಿಬ್ಬಂದಿಯನ್ನು ತಡೆದಿದ್ದಾರೆ. ಸದಸ್ಯರ ಸೂಚನೆಯಂತೆ ನಡೆದುಕೊಂಡಿದ್ದಾಗಿ ಸಿಬ್ಬಂದಿ ನನಗೆ ತಿಳಿಸಿದ್ದಾರೆ. ಪ್ರಕರಣದ ಬಾಲಕಿಯು ತಪ್ಪಿಸಿಕೊಂಡಿದ್ದಾರೆ. ಬಾಲಕಿಗೆ ನ್ಯಾಯ ಕೊಡಿಸಲು
ಸದಸ್ಯರು ವಿಫಲರಾಗಿದ್ದಾರೆ’ ಎಂದು ದೂರಿದರು.

‘ನಗರದಲ್ಲಿನ ಖಾಸಗಿ ಪಾಲನಾ ಕೇಂದ್ರದಲ್ಲಿ ಸೌಲಭ್ಯಗಳು (ಆಹಾರ, ಆರೈಕೆ) ಸರಿಯಾಗಿಲ್ಲ ಎಂದು ಕೇಂದ್ರದಲ್ಲಿರುವವರು ದೂರಿದ್ದರು. ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿತ್ತು. ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲಿಸಿ ಸೆಕ್ಷನ್‌ 75ರಡಿ ಕ್ರಮಕ್ಕೆ 2019ರ ಜುಲೈ 25ರಂದು ಸೂಚನೆ ನೀಡಿದ್ದರು. ಸಂಬಂಧಪಟ್ಟವರು ಈವರೆಗೆ ಕ್ರಮ ಜರುಗಿಸಿಲ್ಲ. ಇದೆಲ್ಲದಕ್ಕೆ ಸಂಬಂಧಿಸಿದಂತೆ ದಾಖಲೆಗಳು ಇವೆ ಎಂದು ಹೇಳಿದರು.

ಜಿಲ್ಲಾಧಿಕಾರಿಯವರು ಮಕ್ಕಳ ರಕ್ಷಣಾ ಜಿಲ್ಲಾ ಘಟಕದ ಅಧ್ಯಕ್ಷರು. ಅವರು ತ್ವರಿತವಾಗಿ ದೂರು, ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಎಂಟು ಶಿಕ್ಷಕರ ವಿರುದ್ಧ ವಿವಿಧ ಪ್ರಕರಣಗಳು ಸಮಿತಿಯಲ್ಲಿ ಇವೆ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT