ಕಡೂರು: ‘ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಜೂರಾಗಿ ಖಾಲಿ ಇದ್ದ ಚರ್ಮರೋಗ ತಜ್ಞರು, ಅರವಳಿಕೆ ತಜ್ಞರ ಹುದ್ದೆಗಳಿಗೆ ವೈದ್ಯರು ನೇಮಕವಾಗಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ’ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಚಂದಾ ತಿಳಿಸಿದರು.

ಆಸ್ಪತ್ರೆಯ ಕಚೇರಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಅವರು, ‘ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇದ್ದ ಚರ್ಮರೋಗ ತಜ್ಞರ ಹುದ್ದೆಗೆ ಡಾ. ರಾಕೇಶ್ ಡಿ.ಎಸ್, ಅರಿವಳಿಕೆ ತಜ್ಞರಾಗಿ ಡಾ. ಬಿಂದು ಬಿ.ಪಿ. ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ರಜೆಯ ಮೇಲೆ ತೆರಳಿದ್ದ ಫಿಜಿಷಿಯನ್ ಸಹ ಕರ್ತವ್ಯಕ್ಕೆ ಮರಳಿದ್ದು, ಕೀಲು ಮೂಳೆ ತಜ್ಞರು ಶೀಘ್ರವೇ ಕರ್ತವ್ಯಕ್ಕೆ ಮರಳಲಿದ್ದಾರೆ ಎಂದರು.

ತಾಂತ್ರಿಕ ದೋಷದಿಂದ ಎಕ್ಸ್-ರೇ ಯಂತ್ರ ದುರಸ್ತಿಯಲ್ಲಿತ್ತು. ಈಗ ಸಂಪೂರ್ಣ ಸರಿಪಡಿಸಲಾಗಿದ್ದು, ಯಂತ್ರ ಕಾರ್ಯನಿರ್ವಹಿಸುತ್ತಿದೆ. ಇಸಿಜಿ ನಿರ್ವಹಿಸಲಾಗುತ್ತಿದ್ದು, ರೇಡಿಯಾಲಜಿಸ್ಟ್ ಹುದ್ದೆ ಭರ್ತಿಯಾಗಲಿದೆ. ಗ್ರೂಪ್-ಡಿ ನೌಕರರ ಕೊರತೆಯನ್ನು ಎನ್ಆರ್ಎಚ್ಎಂ ಶುಶ್ರೂಷಕರು ತುಂಬಿದ್ದಾರೆ ಎಂಬ ಅವರು ಮಾಹಿತಿ ನೀಡಿದರು.

ಚರ್ಮರೋಗ ತಜ್ಞ ಡಾ. ರಾಕೇಶ್, ಕಚೇರಿ ಅಧೀಕ್ಷಕ ಜಿ. ಚಂದ್ರೇಗೌಡ, ಪ್ರಥಮ ದರ್ಜೆ ಸಹಾಯಕಿ ಭಾರತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.