ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result 2024 | ಕಳಸ 4 ಶಾಲೆಗಳಿಗೆ ಶೇ 100 ಫಲಿತಾಂಶ

Published 9 ಮೇ 2024, 13:28 IST
Last Updated 9 ಮೇ 2024, 13:28 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನ 4 ಪ್ರೌಢಶಾಲೆಗಳು ಶೇ 100 ಫಲಿತಾಂಶದ ಸಾಧನೆ ಮಾಡಿವೆ.

ಕುದುರೆಮುಖದ ಸರ್ಕಾರಿ ಪ್ರೌಢಶಾಲೆ, ಕಳಸದ ಅಂಬೇಡ್ಕರ್ ವಸತಿ ಶಾಲೆ ಈ ಸಾಧನೆ ಮಾಡಿದ ಸರ್ಕಾರಿ ಶಾಲೆಗಳು ಎಂಬ ಹೆಗ್ಗಳಿಕೆ ಪಡೆದಿವೆ. ಪಟ್ಟಣದ ಖಾಸಗಿ ಶಾಲೆಗಳಾದ ಜೆಇಎಂ ಶಾಲೆ ಮತ್ತು ಪ್ರಬೋಧಿನಿ ವಿದ್ಯಾ ಕೇಂದ್ರವೂ ಶೇ 100 ಫಲಿತಾಂಶ ದಾಖಲಿಸಿವೆ.

ಕುದುರೆಮುಖ ಸರ್ಕಾರಿ ಶಾಲೆಯ 15 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳಸ ಅಂಬೇಡ್ಕರ್ ವಸತಿ ಶಾಲೆಯ ಎಲ್ಲ 34 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಮೂವರು ಅತ್ಯುನ್ನತ ದರ್ಜೆ, 24 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲ್ಲೇಶ್ (551), ಕಿಶನ್ (550) ಮತ್ತು ತೇಜಶ್ರೀ (542) ಅಂಕ ಗಳಿಸಿದ್ದಾರೆ.

ಜೆಇಎಂ ಶಾಲೆಯ 62 ವಿದ್ಯಾರ್ಥಿಗಳು ಪಾಸಾಗಿದ್ದು, 26 ಮಂದಿ ಅತ್ಯುನ್ನತ ದರ್ಜೆ, 34 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರಾವಣಿ (611), ಪ್ರಾರ್ಥನಾ ಮಹೇಶ್ (605) ಮತ್ತು ಜ್ಯೋತಿಶ್ರೀ (605) ಮೊದಲ ಮೂರು ಸ್ಥಾನ ಗಳಿಸಿದ್ದಾರೆ.

ಪ್ರಬೋಧಿನಿ ಶಾಲೆಯ 45 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 18 ಮಂದಿ ಅತ್ಯುನ್ನತ ದರ್ಜೆಯಲ್ಲಿ, 27 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಿಂಚನಾ (611), ಕೆ.ಪಿ.ಪ್ರಣೀತಾ (598) ಮತ್ತು ಸಂಜನಾ ವಿ.ಸಿ.(596) ಅಂಕ ಗಳಿಸಿದ್ದಾರೆ.

ಕಳಸ ಕೆಪಿಎಸ್ ಶಾಲೆಯ 102 ವಿದ್ಯಾರ್ಥಿಗಳ ಪೈಕಿ 95 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಾಲೆಯು ಶೇ 93 ಫಲಿತಾಂಶ ಪಡೆದಿದೆ. ಶಾಲೆಯ ಆಂಗ್ಲ ಮಾಧ್ಯಮ ವಿಭಾಗ ಶೇ 100 ಫಲಿತಾಂಶ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT