ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಕಾಫಿನಾಡು ಚಿಕ್ಕಮಗಳೂರಿಗೆ ‘ಬಿ’ ಶ್ರೇಣಿ

Last Updated 11 ಆಗಸ್ಟ್ 2020, 4:26 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ರಾಜ್ಯ ಶ್ರೇಯಾಂಕ ಪಟ್ಟಿಯಲ್ಲಿ ಜಿಲ್ಲೆಗೆ ‘ಬಿ’ ಶ್ರೇಣಿ ಗ್ರೇಡ್‌) ಸಂದಿದೆ. ಸಂತ ಜೋಸೆಫರ ಬಾಲಕಿಯರ ಪ್ರೌಢಶಾಲೆಯ ಐ.ಪಿ.ತನ್ಮಯಿ ಅವರು 625ಕ್ಕೆ 625 ಅಂಕ ಪಡದು ಕೀರ್ತಿ ತಂದಿದ್ದಾರೆ.

ಜಿಲ್ಲೆ ಕಳೆದ ಸಾಲಿನಲ್ಲಿ ಶೇ 82.76 ಫಲಿತಾಂಶ ದಾಖಲಿಸಿ, 14ನೇ ಸ್ಥಾನ ಪಡೆದಿತ್ತು. ಈ ಬಾರಿಯಿಂದ ಸ್ಥಾನ ಶ್ರೇಯಾಂಕ ಕೈಬಿಟ್ಟು, ಶ್ರೇಣಿ ಪ‍ದ್ಧತಿ ಅಳವಡಿಸಲಾಗಿದೆ.

ಜಿಲ್ಲೆಯಲ್ಲಿ 38 ಸರ್ಕಾರಿ ಶಾಲೆಗಳು, 14 ಅನುದಾನಿತ ಶಾಲೆಗಳು ಹಾಗೂ 52 ಅನುದಾನರಹಿತ ಶಾಲೆಗಳು ‘ಎ’ ಶ್ರೇಣಿ, 52 ಸರ್ಕಾರಿ ಶಾಲೆಗಳು, 40 ಅನುದಾನಿತ ಶಾಲೆಗಳು ಹಾಗೂ 12 ಅನುದಾನ ರಹಿತ ಶಾಲೆಗಳು ‘ಬಿ’ ಶ್ರೇಣಿ, 45 ಸರ್ಕಾರಿ ಶಾಲೆಗಳು, 51 ಅನುದಾನಿತ ಶಾಲೆಗಳು ಹಾಗೂ 8 ಅನುದಾನರಹಿತ ಶಾಲೆಗಳು ‘ಸಿ’ ಶ್ರೇಣಿ ಪಡೆದಿವೆ.

ಸಾಧಕರು: ಜೆವಿಎಸ್ ಶಾಲೆಯ ಎಂ.ಎಸ್‌.ಶರಣ್ಯಾ– 622, ಸೆಂಟ್ ಮೇರೀಸ್ ಹೈಸ್ಕೂಲ್‌ನ ಸಿ.ಎಸ್. ಹರ್ಷ– 621, ಪೂರ್ಣಪ್ರಜ್ಞೆ ಇಂಗ್ಲಿಷ್‌ ಮಾಧ್ಯಮ ಶಾಲೆಯ ಶ್ರೇಯಸ್‌ ಭಟ್– 621, ತರೀಕೆರೆ ತಾಲ್ಲೂಕಿನ ಸೊಕ್ಕೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಿ.ಡಿ.ಯಶಸ್ವಿನಿ– 621, ಸೊಕ್ಕೆಯ ಸರ್ಕಾರಿ ಪ್ರೌಢಶಾಲೆಯ ಟಿ.ಎಸ್.ಲಿಖಿತ್– 620, ಶೃಂಗೇರಿ ತಾಲ್ಲೂಕಿನ ಬೇಗಾರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಜಿ.ಎಂ.ರಕ್ಷಿತ್– 619, ಚಿಕ್ಕಮಗಳೂರಿನ ಜ್ಯೋತಿನಗರದ ಸಂತ ಜೋಸೆಫರ ಪ್ರೌಢಶಾಲೆಯ ಕೆ.ಎಲ್‌.ರಕ್ಷಾ– 619 , ಸೈಂಟ್‌ ಮೇರಿಸ್‌ ಹೈಸ್ಕೂಲ್‌ನ ಸಿ.ಎಸ್‌.ಅಪೂರ್ವಾ– 617, ವಿನೀತ್– 613, ನಿಧಿ ಡಿ.ನಾಯ್ಡು 610, ಸಾತ್ವಿಕ್‌ ಆರ್‌.ಗೌಡ– 606 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

59 ಮಂದಿ ಉನ್ನತ ಶ್ರೇಣಿ: ನಗರದ ಸೇಂಟ್‌ ಮೇರಿಸ್‌ ಶಾಲೆಯಲ್ಲಿ 59 ಮಂದಿ ಉನ್ನತ ಶ್ರೇಣಿ ಪಡೆದಿದ್ದಾರೆ ಎಂದು ಶಾಲೆ ಪ್ರಕಟಣೆ ತಿಳಿಸಿದೆ.

ಜ್ಞಾನರಶ್ಮಿ ಶಾಲೆಗೆ ಶೇ 97 ಫಲಿತಾಂಶ: ಹಳೆಉಪ್ಪಳ್ಳಿಯ ಜ್ಞಾನರಶ್ಮಿ ಶಾಲೆ ಶೇ 97 ಫಲಿತಾಂಶ ದಾಖಲಿಸಿದೆ. 32 ವಿದ್ಯಾರ್ಥಿಗಳ ಪೈಕಿ ಮೂವರು ಅತ್ಯುತ್ತಮ, ಶ್ರೇಣಿ ಪಡೆದಿದ್ದಾರೆ. ಎಂ.ಚಿತ್ರಾ 577, ವಿ.ವಿಕಾಸ್ 566, ಜೆ.ಎಂ.ವಿನಯಕುಮಾರ್ 555ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

‌ಜೆವಿಎಸ್‌ ಶಾಲೆ; ಶೇ 92 ಫಲಿತಾಂಶ: ನಗರದ ನಗರದ ಜೆವಿಎಸ್ ಆಂಗ್ಲ ಮಾಧ್ಯಮ ಶಾಲೆ ಶೇ 92.66 ಫಲಿತಾಂಶ ದಾಖಲಿಸಿದೆ. 72 ವಿದ್ಯಾರ್ಥಿಗಳಲ್ಲಿ 19 ಮಂದಿ ಉನ್ನತ ಶ್ರೇಣಿ ಪಡೆದಿದ್ದಾರೆ. ಫಾತಿಮಾ ಮೆಹಕ್ 593 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT