ಭಾನುವಾರ, ಆಗಸ್ಟ್ 1, 2021
27 °C

ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳೆಹೊನ್ನೂರು: ಇಬ್ಬರು ಮಕ್ಕಳೊಂದಿಗೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಕೊಪ್ಪ ಎಂಬಲ್ಲಿ ನಡೆದಿದೆ.

ಲಕ್ಷ್ಮೀ (32), ಸೌಜನ್ಯಾ (8), ಆಧ್ಯಾ (2) ಮೃತರು. ಬಣಕಲ್ ಸಮೀಪದ ತ್ರಿಪುರದ ಲಕ್ಷ್ಮೀಯನ್ನು ಹುಣಸೆಕೊಪ್ಪದ ಭಾಸ್ಕರ್ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಶುಕ್ರವಾರ ಸಂಜೆ ಹುಣಸೆಕೊಪ್ಪದ ಮನೆಯಿಂದ ಮೂವರೂ ಹೊರಹೋದವರು ವಾಪಸ್‌ ಬಂದಿರಲಿಲ್ಲ. ಭಾನುವಾರ ಅಲ್ಫೊನ್ಸೋ ಎಂಬುವವರ ತೋಟದ ಕೆರೆಯಲ್ಲಿ ಮೂವರ ಶವ ಪತ್ತೆಯಾಗಿತ್ತು.

‘ವರದಕ್ಷಿಣೆಗಾಗಿ ಭಾಸ್ಕರ್ ಆಗಾಗ ಕಿರುಕುಳ ನೀಡುತ್ತಿದ್ದ ಕಾರಣ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿ ಮೃತರ ಸಹೋದರ ಬಣಕಲ್ ಸಮೀಪದ ತ್ರಿಪುರದ ಟಿ.ಎಚ್.ರವಿಚಂದ್ರ ಅವರು ಬಾಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಸಿಕೊಂಡ ಠಾಣಾಧಿಕಾರಿ ನೀತು ಆರ್.ಗುಡೆ ತನಿಖೆ ಕೈಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು