ಮೂಡಿಗೆರೆ: ಹೊಸ ವರ್ಷಾಚರಣೆಯಲ್ಲಿ ಹೊರ ರಾಜ್ಯಗಳ ತೆರಿಗೆ ರಹಿತ ಮದ್ಯ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಡಿವೈಎಸ್ಪಿ ಟಿ.ಕೀರ್ತಿಕುಮಾರ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲ್ಲೂಕಿನ ಹೋಂ ಸ್ಟೆ, ರೆಸಾರ್ಟ್ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

'ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಹೋಂ ಸ್ಟೇ, ರೆಸಾರ್ಟ್ ಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಪಾರ್ಟಿಗಳನ್ನು ಆಯೋಜಿಸಲು ಹಾಗೂ ದೊಡ್ಡ ಶಬ್ಧದ ಡಿಜೆಯನ್ನು ಬಳಸಲು ಸಿ.ಎಲ್.5 ಪರವಾನಗಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಹೊಸ ವರ್ಷಾಚರಣೆಯಲ್ಲಿ ಹೋಂಸ್ಟೆ ಹಾಗೂ ರೆಸಾರ್ಟ್ನಲ್ಲಿ ಮದ್ಯದ ಪಾರ್ಟಿ ಆಯೋಜಿಸಿದಲ್ಲಿ ಗೋವಾ ಹಾಗೂ ಹೊರ ರಾಜ್ಯಗಳ ತೆರಿಗೆ ರಹಿತ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ಅಂತ ಮದ್ಯ ಮಾರಾಟ ಕಂಡು ಬಂದಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ಹೊಸ ವರ್ಷಾಚರಣೆಯಲ್ಲಿ 100ರಿಂದ 200 ಜನ ಡಿಜೆ ಪಾರ್ಟಿಗೆ ಸೇರಿದರೆ ದಿನಕ್ಕೆ ₹11,500 ಶುಲ್ಕ ಕಟ್ಟಿದಲ್ಲಿ ಪರವಾನಗಿ ನೀಡಲಾಗುವುದು. ಅದನ್ನು ಒಂದೆರಡು ದಿನಗಳ ಮುಂಚಿತವಾಗಿ ಪಡೆಯಬಹುದು' ಎಂದರು.

ಇತ್ತೀಚಿನ ದಿನಗಳಲ್ಲಿ ಗಾಂಜಾ, ಅಫಿಮಿನಂತ ಮಾದಕ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ರವಾಸಿಗರ ಬಳಿ ಮಾದಕ ವಸ್ತುಗಳು ಕಂಡು ಬಂದರೆ ದೂರು ನೀಡಬೇಕು. ದೂರು ಬಂದಲ್ಲಿ ನಮ್ಮ ತಂಡ ಬಂದು ಕ್ರಮ ಕೈಗೊಳ್ಳುತ್ತದೆ ಹಾಗೂ ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು’ ಎಂದರು.

ಅಬಕಾರಿ ಇನ್ ಸ್ಪೆಕ್ಟರ್ ನಾರಾಯಣ್, ಹೋಂಸ್ಟೆ ಹಾಗೂ ರೆಸಾರ್ಟ್ ಸಂಘದ ಅಧ್ಯಕ್ಷ ಜಿ.ಎಂ.ಜಗದೀಶ್ ಗುತ್ತಿ, ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ಕೊಟ್ಟಿಗೆಹಾರ ಸಂಜಯ್, ಬಲಿಗೆ ಪ್ರಶಾಂತ್, ಕಾರ್ತಿಕ್ ಪಟ್ಟದೂರು, ದೀಕ್ಷಿತ್ ಚಿತ್ರಗುತ್ತಿ, ಪವಿತ್ರ ಸೇರಿದಂತೆ ಹಲವು ಹೋಂಸ್ಟೆ ಹಾಗೂ ರೆಸಾರ್ಟ್ ಮಾಲೀಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.