ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲ್ಲಾಳರಾಯನ ದುರ್ಗಕ್ಕೆ ಪರಿಸರ ಚಾರಣ

ತೇಜಸ್ವಿ ಪ್ರತಿಷ್ಠಾನದಿಂದ ಪರಿಸರ ಅಧ್ಯಯನ
Last Updated 14 ನವೆಂಬರ್ 2022, 2:50 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಇಲ್ಲಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಬಲ್ಲಾಳರಾಯನ ದುರ್ಗಕ್ಕೆ ಪರಿಸರ ಅಧ್ಯಯನ ಚಾರಣ ನಡೆಯಿತು.

ರಾಜ್ಯದ ವಿವಿಧೆಡೆಯಿಂದ ಬಂದ ಚಾರಣಿಗರು ಚಾರಣದಲ್ಲಿ ಭಾಗವಹಿಸಿದ್ದರು. ರಾಣಿ ಝರಿಯಿಂದ ಪ್ರಾರಂಭವಾದ ಚಾರಣ ಅರಣ್ಯದ ನಡುವೆ ಸಾಗಿ ಬಲ್ಲಾಳರಾಯನ ದುರ್ಗ ತಲುಪಿತು. ಚಾರಣಿಗರು ಅರಣ್ಯದ ನಡುವೆ ಸಾಗುತ್ತಾ ಅಪರೂಪದ ಸಸ್ಯ ಸಂಕುಲ, ಕೀಟ, ಚಿಟ್ಟೆ ಮುಂತಾದವುಗಳನ್ನು ವೀಕ್ಷಿಸುತ್ತಾ ಹೆಜ್ಜೆ ಹಾಕಿದರು. ಐತಿಹಾಸಿಕ ಸ್ಥಳಗಳು ಹಾಗೂ ನಿಸರ್ಗ ರಮಣೀಯ ಪ್ರದೇಶಗಳಲ್ಲಿ ಚಾರಣ ಸಾಗಿತು.

ತೇಜಸ್ವಿ ಒಡನಾಡಿಗಳಾದ ಬಾಪು ದಿನೇಶ್, ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ನಂದನ್ ಕುಪ್ಪಳ್ಳಿ, ನಂದೀಶ್ ಬಂಕೇನಹಳ್ಳಿ, ಪೂರ್ಣೆಶ್ ಮತ್ತಾವರ, ಪ್ರತಿಷ್ಠಾನದ ಸಿಬ್ಬಂದಿ ಸತೀಶ್, ಸಂಗೀತಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT