ಕಡೂರು: ತಾಲ್ಲೂಕಿನ ಶಿವಗಂಗಾಗಿರಿ ಕ್ಷೇತ್ರದ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ.

ಮೃತ್ಯುಂಜಯ ದೇವಸ್ಥಾನದ ಬಾಗಿಲನ್ನು ಒಡೆದಿರುವ ಕಳ್ಳರು, ಶಿವಗಂಗಾಗಿರಿ ಅಭಿವೃದ್ಧಿ ಸಮಿತಿ ಕಾರ್ಯಾಲಯಕ್ಕೂ ನುಗ್ಗಿ ಅಲ್ಲಿನ ಸಿ.ಸಿ ಟಿ.ವಿ ಕ್ಯಾಮೆರಾ ಸಿಸ್ಟಂ ಹಾಳು ಗೆಡವಿದ್ದಾರೆ.

ಬೀರುವಿನಲ್ಲಿಟ್ಟಿದ್ದ ₹50 ಸಾವಿರ ಹಣ ದೋಚಿದ್ದು, ಭಕ್ತರು ನೀಡಿದ್ದ 230 ಗ್ರಾಂ ಬೆಳ್ಳಿಯನ್ನು ಕೊಂಡೊಯ್ದಿದ್ದಾರೆ. ದೇವಸ್ಥಾನದ ಹುಂಡಿ ಒಡೆಯಲು ಯತ್ನಿಸಿದರೂ ಸಫಲರಾಗಿಲ್ಲ.

ಚೌಡಮ್ಮದೇವಿ ವಿಗ್ರಹದ ಕೊರಳಲ್ಲಿದ್ದ 4ಗ್ರಾಂ ಚಿನ್ನದ ಮಾಂಗಲ್ಯ, 1.5 ಗ್ರಾಂ ತೂಕದ ಮೂಗು ನತ್ತನ್ನೂ ಕದ್ದಿದ್ದಾರೆ. ಕಳ್ಳರು ಒಳಬರುವುದಕ್ಕೂ ಮುನ್ನ ದೇವಸ್ಥಾನದಲ್ಲಿ ಅಳವಡಿಸಿರುವ ಸೈರನ್ ವೈರ್ ಕತ್ತರಿಸಿದ್ದಾರೆ. ಕಾರ್ಯಾಲಯದಲ್ಲಿದ್ದ ಸಿ.ಸಿ ಟಿ.ವಿ ಕ್ಯಾಮೆರಾ ಡಿವಿಆರ್ನ್ನು ಹೊತ್ತೊಯ್ದಿದ್ದಾರೆ.

ಶಿವಗಂಗಾಗಿರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಲ್ಲೇದೇವರಹಳ್ಳಿ ದೇವರಾಜಪ್ಪ ಪಂಚನಹಳ್ಳಿ ಅವರು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.