ಚಿಕ್ಕಮಗಳೂರು: ವಿಶ್ವ ಬಾಹ್ಯಾಕಾಶ ಸಪ್ತಾಹ–2025ರ ಅಂಗವಾಗಿ ಬಾಹ್ಯಾಕಾಶ ಮತ್ತು ಮಾದರಿ ಕ್ಷಿಪಣಿಗಳ ಪ್ರದರ್ಶನವನ್ನು ನಗರದ ಟಿಎಂಎಸ್ ಕಾಲೇಜು ಆವರಣದಲ್ಲಿ ಅ. 9ರಂದು ಹಮ್ಮಿಕೊಳ್ಳಲಾಗಿದೆ ಎಂದು ತಕ್ಷ್ ಅಕಾಡೆಮಿ ಮುಖ್ಯಸ್ಥ ಚೇತನ್ ಕುಮಾರ್ ತಿಳಿಸಿದರು.

ಐಎಸ್ಆರ್ಒ ಬೆಂಗಳೂರು, ಟಿಎಂಎಸ್ ಶಿಕ್ಷಣ ಸಂಸ್ಥೆ ಮತ್ತು ತಕ್ಷ್ ಅಕಾಡೆಮಿ, ರೋಟರಿ ಮತ್ತು ರೋಟರಿ ಇನ್ನರ್ವಿಲ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕು ಮತ್ತು ಜಿಲ್ಲೆಯ ಎಲ್ಲಾ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ, ಜ್ಞಾಪಕ ಶಕ್ತಿ ಪರೀಕ್ಷೆ, ಚಿತ್ರಕಲೆ ಮತ್ತು ಆಶು ಭಾಷಣ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸಾರ್ವಜನಿಕರು ಕೂಡ ಈ ಪ್ರದರ್ಶನ ವೀಕ್ಷಿಸಲು ಬೆಳಿಗ್ಗೆ 9.30ರಿಂದ 4ರವರೆಗೆ ಭೇಟಿ ನೀಡಿ ಕಾರ್ಯಕ್ರಮದ ಉಪಯೋಗ ಪಡೆಯಬಹುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಐಎಸ್ಆರ್ಒನಿಂದ ಬರುವ ವಿಜ್ಞಾನಿಗಳು ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಅರಿವು ಮೂಡಿಸುವ ಸಲುವಾಗಿ ಯು.ಆರ್. ರಾವ್ ಸ್ಯಾಟಲೈಟ್ ಸೆಂಟರ್(ಐಎಸ್ಆರ್ಒ) ಬೆಂಗಳೂರು ವತಿಯಿಂದ ಅ. 4ರಿಂದ 10ರವರೆಗೆ ವಿಶ್ವ ಬಾಹ್ಯಾಕಾಶ ಸಪ್ತಾಹ ನಡೆಸುತ್ತಿದ್ದು, ಚಿಕ್ಕಮಗಳೂರು ನಗರದಲ್ಲಿ ಒಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸ್ಪರ್ಧೆಗಳಲ್ಲಿ ಭಾಗವಹಿಸುವವರು ಅನಿತಾ: 9242429996, ಪ್ರಸಾದ್: 9900452649, ಸೌಮ್ಯ: 6361240411 ಸಂಪರ್ಕಿಸಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟಿಎಂಎಸ್ ಶಾಲೆ ಕಾರ್ಯದರ್ಶಿ ಶುಭದ, ಸಂಸ್ಥೆಯ ಉಪಾಧ್ಯಕ್ಷ ಸವಿತಾ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಹರ್ಷ, ಪ್ರಾಂಶುಪಾಲ ನಟರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.