ಚಿಕ್ಕಬಳ್ಳಾಪುರ: ಯುದ್ಧ ಪೀಡಿತ ಅಬುಧಾಬಿ ಮತ್ತು ದುಬೈನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 20 ಪ್ರವಾಸಿಗರು ಸಿಲುಕಿದ್ದಾರೆ. ಕುಟುಂಬ ಸದಸ್ಯರೊಂದಿಗೆ ತೆರಳಿದ್ದ ಬಾಗೇಪಲ್ಲಿಯ ಎಂಟು ಮತ್ತು ಶಿಡ್ಲಘಟ್ಟದ 12 ಪ್ರವಾಸಿಗರು ಸುರಕ್ಷಿತವಾಗಿದ್ದಾರೆ.

ಬಾಗೇಪಲ್ಲಿಯ ಬಾಬುರೆಡ್ಡಿ, ನರೇಂದ್ರ ರೆಡ್ಡಿ ಮತ್ತು ಅಶೋಕ್ ಕುಟುಂಬ ಸದಸ್ಯರ ಜೊತೆ ಫೆ.24ರಂದು ಅಬುಧಾಬಿಗೆ ತೆರಳಿದ್ದರು. ಅಲ್ಲಿಂದ ಅವರು ಮಾರ್ಚ್ 1ರಂದು ಬೆಂಗಳೂರಿಗೆ ಮರಳಬೇಕಿತ್ತು. ಆದರೆ, ಯುದ್ಧ ಆರಂಭವಾದ ಕಾರಣ ಅಲ್ಲಿಯೇ ಸಿಲುಕಿದ್ದು, ಹೋಟೆಲ್ವೊಂದರಲ್ಲಿ ಉಳಿದುಕೊಂಡಿದ್ದಾರೆ. ಬಾಗೇಪಲ್ಲಿಯಲ್ಲಿರುವ ತಮ್ಮ ಕುಟುಂಬ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಅದೇ ರೀತಿ ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿಯ ವೈದ್ಯ ದಂಪತಿ ಡಾ. ಮಧುಕರ್, ಡಾ. ನಮಿತಾ ಮತ್ತು ಮಗಳು ಸೇರಿದಂತೆ ಒಟ್ಟು 12 ಪ್ರವಾಸಿಗರು ಎಂಟು ದಿನಗಳ ಪ್ರವಾಸಕ್ಕೆ ದುಬೈಗೆ ತೆರಳಿದ್ದರು. ಭಾನುವಾರ ಮರಳಬೇಕಿತ್ತು. ಆದರೆ, ವಿಮಾನ ಸಂಚಾರ ದಿಢೀರ್ ರದ್ದುಗೊಂಡಿದ್ದರಿಂದ 12 ಜನ ದುಬೈ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾರೆ. ಎಲ್ಲರೂ ಸುರಕ್ಷಿತವಾಗಿರುವುದಾಗಿ ಡಾ. ಮಧುಕರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಗಂಗನಹಳ್ಳಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಡಾ. ಮಧುಕರ್ ತಮ್ಮ ತಂದೆ ಮತ್ತು ತಾಯಿ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿತ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.