ತರೀಕೆರೆ: ಸಮೀಪದ ಸ್ಟೇಷನ್ ದುಗ್ಲಾಪುರದ ಬಳಿಯ ರಂಗೋಜಿ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ದುಗ್ಲಾಪುರ ಗ್ರಾಮದ ವಿಜಯಕುಮಾರಿ ಮತ್ತು ಲೋಕೇಶ್ ದಂಪತಿಯ ಪುತ್ರ ಧನುಷ್ (15) ಮತ್ತು ನೇತ್ರಾ ಹಾಗೂ ಶ್ರೀನಿವಾಸ್ ದಂಪತಿಯ ಪುತ್ರ ಸಚಿನ್ (15) ಮೃತ ಬಾಲಕರು.
ಈ ಬಾಲಕರು ಬಾವೀಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಓದು ಮತ್ತು ಕ್ರೀಡೆಯಲ್ಲಿ ಮುಂದಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.
ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.