ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಬೀನ್ಸ್‌ ದುಬಾರಿ, ಹಿರೇಕಾಯಿ ಅಗ್ಗ

ಬಿಸಿಲಿನ ತಾಪ: ಮಾರುಕಟ್ಟೆಗೆ ತರಕಾರಿ ಆವಕ ಕಡಿಮೆ
Published 25 ಮೇ 2023, 23:36 IST
Last Updated 25 ಮೇ 2023, 23:36 IST
ಅಕ್ಷರ ಗಾತ್ರ

ರಘು ಕೆ.ಜಿ.

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಶುರುವಾಗಿದ್ದರೂ, ಮಾರುಕಟ್ಟೆಗೆ ತರಕಾರಿ ಆವಕದಲ್ಲಿ ಹೆಚ್ಚಳವಾಗಿಲ್ಲ. ಕಳೆದ ವಾರಕ್ಕೆ ಹೋಲಿಸಿದರೆ ಬೆಲೆ ಏರುಗತಿಯಲ್ಲೇ ಇದೆ. ಬೀನ್ಸ್‌ ದರ ಕೆ.ಜಿಗೆ ₹100ರ ಗಡಿ ದಾಟಿದೆ. ಆದರೆ,ಹಿರೇಕಾಯಿ ದರ ಕೆ.ಜಿ.ಗೆ ₹ 8 ಕ್ಕೆ ಕುಸಿದಿದೆ. 

ಬಿಸಿಲಿನ ತಾಪದಿಂದ ತರಕಾರಿ ಇಳುವರಿ ಕಡಿಮೆಯಾಗಿದೆ. ಬೆಲೆಯಲ್ಲಿಯೂ ಸಾಕಷ್ಟು ಏರುಪೇರು ಕಂಡಿದೆ. ಇತರ ತರಕಾರಿಗಳಿಗೆ ಹೋಲಿಸಿದದರೆ ಹಿರೇಕಾಯಿ ಬೆಳೆ  ಜಾಸ್ತಿ ಇದೆ. ಮಾರುಕಟ್ಟೆ ಹೆಚ್ಚು ಪೂರೈಕೆಯಾಗುತ್ತಿರುವುದರಿಂದ ದರ  ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. 

ಚಿಲ್ಲರೆ ಮಾರುಕಟ್ಟೆಯಲ್ಲಿ ಬೀನ್ಸ್ ಕೆ.ಜಿಗೆ ₹100, ಬಟಾಣಿ ₹ 200, ಆಲೂಗಡ್ಡೆ ₹25, ಟೊಮೆಟೊ: ₹30, ಈರುಳ್ಳಿ (ದಪ್ಪ): ₹20 (ಸಣ್ಣದು), ₹14 ದರ ಇದೆ. ಹಿರೇಕಾಯಿ: ₹ 30, ಕ್ಯಾರೆಟ್: ₹ 60, ಕ್ಯಾಪ್ಸಿಕಂ: ₹ 60, ಸಾಂಬರ್ ಸೌತೆ: ₹ 30, ಹಸಿರುಮೆಣಸಿನಕಾಯಿ ₹40, ಬೀಟ್‌ರೂಟ್‌ ₹40 ದರ ಇದೆ.

ನುಗ್ಗೇಕಾಯಿ ಕೆ.ಜಿಗೆ ₹60, ಬದನೆಕಾಯಿ (ದುಂಡು)₹40, ಉದ್ದ ₹60, ಗೆಣಸು ಕೆ.ಜಿಗೆ ₹60 ಇದೆ. ಮಳೆ ಕಾರಣ ಸೊಪ್ಪಿನ ದರದಲ್ಲಿ ಏರಿಕೆಯಾಗಿದೆ. ಪಾಲಕ್‌, ಸೊಪ್ಪುಸೀಗೆ, ಕೊತ್ತಂಬರಿ, ಕರಿಬೇವು ಪ್ರತಿ ಕಟ್ಟಿಗೆ ₹10 ದರ ಇದೆ.

ಸಿಹಿಕುಂಬಳ ಕ್ಯಾಪ್ಸಿಕಂ, ಬೀನ್ಸ್‌, ಎಲೆಕೋಸು ತರಕಾರಿ ಆವಕ  ಜಾಸ್ತಿ ಇದೆ. ಶುಂಠಿ 60 ಕೆ.ಜಿ ಚೀಲಕ್ಕೆ ₹8 ಸಾವಿರ, ಸೌತೆಕಾಯಿ 50 ಕೆ.ಜಿ. ಚೀಲಕ್ಕೆ ₹450 ಧಾರಣೆ ಇದೆ.

ಜಮೀನಿನಲ್ಲಿ ಸ್ವಂತ ಬೋರ್‌ ಇಲ್ಲ. ಕಾಲುವೆ ನೀರು ಹಾಯಿಸಿ ಬೀನ್ಸ್‌, ಮೆಣಸಿನಕಾಯಿ, ಸೊಪ್ಪು ಮೊದಲಾದ ತರಕಾರಿ ಬೆಳೆದಿದ್ದೇನೆ. ಬಿಸಿಲಿನ ತಾಪಕ್ಕೆ ಈ ಬಾರಿ ಇಳುವರಿ ಕಡಿಮೆಯಾಗಿದೆ. ಆದರೆ ಮಾರುಕಟ್ಟೆಯಲ್ಲಿ ಧಾರಣೆ ಪರವಾಗಿಲ್ಲ ಎಂದು ನಾರಾಯಣಪುರದ ಬೆಳೆಗಾರ ಬಸವಯ್ಯ ತಿಳಿಸಿದರು.

- ಇಳುವರಿ ಆಧರಿಸಿ ಬೆಲೆ ಏರಿಳಿತ ಇಳುವರಿ ಪ್ರಮಾಣ ಹೆಚ್ಚಾದಾಗ ಬೆಲೆಯಲ್ಲಿಯೂ ಏರುಪೇರಾಗುತ್ತದೆ. ಕೇರಳ ಮಂಗಳೂರು ಉಡುಪಿ ಸಹಿತ ವಿವಿಧೆಡೆಗಳಿಗೆ ಇಲ್ಲಿಂದ ತರಕಾರಿ ರವಾನೆಯಾಗುತ್ತದೆ ಎಂದು ಎಂ.ಎಸ್‌.ಎನ್‌ ವೆಜಿಟೇಬಲ್‌ ಮಳಿಗೆಯ ಸಗಟು ವ್ಯಾಪಾರಿ ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT